ವಿಜಯಪುರ : ಮತ್ತೆ ಬಿಜೆಪಿ ಸೇರ್ಪಡೆಯ ಬಗ್ಗೆ ಬಸನ ಗೌಡ ಪಾಟೀಲ್ ಯತ್ನಾಳ್ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸದ್ಯದಲ್ಲೇ ತಮಗೆ ಬಿಜೆಪಿ ಬಾಗಿಲು ತೆರೆಯಲಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಇನ್ನೆರಡು ತಿಂಗಳಲ್ಲಿ ಮತ್ತೆ ಬಿಜೆಪಿ ಸೇರ್ಪಡೆಯಾಗಲಿದ್ದೇನೆ ಎಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿದೆ.ಹಾಗೆ ನೋಡಿದ್ರೆ ಇನ್ನೂ 18 ವರ್ಷಗಳ ಕಾಲ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಂತಿಲ್ಲ.ಆದ್ರೆ ಕೇವಲ ಇನ್ನೆರಡು ತಿಂಗಳಲ್ಲಿ ನಾನು ಬಿಜೆಪಿ ಸೇರ್ಪಡೆಯಾಗಲಿದ್ದೇನೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿ, ಶಕ್ತಿ ಇಲ್ಲದವರು ಯಡಿಯೂರಪ್ಪನ ಮನೆ ಮುಂದೆ ಅಪ್ಪಾಜಿ ಎಂದುಕೊಂಡು, ವಿಜಯೇಂದ್ರನ ಬಳಿ ಕೈಕಟ್ಟಿಕೊಂಡು ನಿಲ್ಲಬೇಕಾಗುತ್ತದೆ ಎಂದು ಹೇಳಿದ್ದಾರೆ.ಈ ಮೂಲಕ ಸದ್ಯದಲ್ಲೇ ತಾವು ಬಿಜೆಪಿಗೆ ಮರಳುವ ಸುಳಿವು ನೀಡಿದ್ದಾರೆ.




