ಸಂಕೇಶ್ವರ: ಶ್ರೀ ಬಾಪೂಜಿ ಇಂಟರ್ನ್ಯಾಷನಲ್ ಕಾಲೇಜ್ ಹುಕ್ಕೇರಿಯಲ್ಲಿ ನಡೆದ ಸತ್ಕಾರ ಸಮಾರಂಭ ಹಾಗೂ ಸಂಕೇಶ್ವರ ನಗರದ ಪುರಸಭೆ ಕಾರ್ಯಾಲಯದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ವಿಶ್ವ ಯೋಗ ದಿನಾಚರಣೆ ನಿಮಿತ್ತ 21 ದಿನಗಳ ಕಾಲ ಯೋಗ ಹಾಗೂ ಪ್ರಾಣಾಯಾಮ ತರಬೇತಿಯನ್ನು ನೀಡಲಾಯಿತು.

ಈ ತರಬೇತಿಯು ಯೋಗ ಗುರುಗಳಾದ ಅಜಯ್ ಸಾರಾಪುರ ಹಾಗೂ ಕುಮಾರ್ ಬಡಿಗೇರ್ ಹುಕ್ಕೇರಿ ಇವರ ನೇತೃತ್ವದಲ್ಲಿ ನಡೆಯಿತು. ನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಯೋಗ ಮಾಡುವುದರಿಂದ ಶರೀರ ಮತ್ತು ಮನಸ್ಸನ್ನು ಸದ್ದಡ ಗೊಳಿಸಬಹುದು. ಈಗಿನ ಒತ್ತಡದ ಜೀವನದಲ್ಲಿ ಮನುಷ್ಯನ ಜೀವನಶೈಲಿ ಬದಲಾಗಿದ್ದು ಅನೇಕ ರೋಗಗಳಾದ ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಮಾನಸಿಕ ಒತ್ತಡ ಪ್ರತಿಯೊಬ್ಬ ಮನುಷ್ಯನಲ್ಲಿ ತೊಂದರೆಯಾಗುತ್ತಿದ್ದು ಇದಕ್ಕೆ ಪರಿಹಾರ ಒಂದೇ ಯೋಗ. ತರಬೇತಿಯಲ್ಲಿ ಸೂರ್ಯ ನಮಸ್ಕಾರದ ಮಹತ್ವ, ಆಹಾರ ಪದ್ಧತಿ ಧ್ಯಾನ ಹೀಗೆ ಅನೇಕ ಮಾಹಿತಿಗಳನ್ನು ನೀಡಲಾಯಿತು. ಪುರಸಭೆಯ ಮುಖ್ಯಾಧಿಕಾರಿಗಳಾದ ಪ್ರಕಾಶ್ ಮಠದ, ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ವಂದೇ ಮಾತರಂ ಯೋಗ ತರಬೇತಿ ಕೇಂದ್ರದ ಯೋಗ ಶಿಬಿರಾರ್ಥಿಗಳಾದ ಮಹಾಂತೇಶ್ ಗಣಾಚಾರಿ ಕಾಡಪ್ಪ ಬಸ್ತುವಾಡ, ಗಣೇಶ್ ಸುತಾರ್, ಶಿವ ಮಂಟೂರಿ ಇತರರು ಈ ಯೋಗ ತರಬೇತಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ವರದಿ: ಶಿವಾಜಿ ಎನ್ ಬಾಲೇಶಗೋಳ




