ಭಾಲ್ಕಿ : ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಸುಕ್ಷೇತ್ರ ಶಾಂತಲಿಂಗೇಶ್ವರ ಸಂಸ್ಥಾನ ಮಠದಲ್ಲಿ. ಶ್ರಾವಣ ಮಾಸದ ನಿಮಿತ್ತ ಮಠದ ಪಿಠಾದಿಪತಿಗಳಾದ ಮನಿಪ್ರ ಡಾಕ್ಟರ್ ಶಿವಾನಂದ ಮಹಾಸ್ವಾಮಿಗಳು 21 ದಿವಸಗಳ ಕಾಲ ಇಷ್ಟಲಿಂಗ ಶಿವಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶ್ರಾವಣ ಮಾಸದ ಅಮಾವಾಸ್ಯೆಯ ಗುರುವಾರ ದಿಂದ ಈ ಪೂಜೆ ಕೈಗೊಳ್ಳುತ್ತಿದ್ದು , ಶ್ರಾವಣ ಮಾಸದ ಮೂರನೆ ಸೋಮವಾರ ವರೆಗೂ ಮುಂದುವರಿಸುವುದಾಗಿ ಹಾಗೂ ಮಠದಲ್ಲಿ ವಾಸ್ತವ್ಯ ಮಾಡುವುದಾಗಿ ತಿಳಿಸಿದ್ದು. ಶ್ರಾವಣ ಮಾಸದ ಮೂರನೆ ಸೋಮವಾರ ಇಷ್ಟ ಲಿಂಗ ಶಿವಯೋಗ ಕಾರ್ಯಕ್ರಮ ಸಮಾಪ್ತಿ ಹಾಗೂ ನಡೆಯಲಿರುವ ಜಾತ್ರೆ, ಜಂಗಿ ಕುಸ್ತಿ ಹಾಗೂ ರಥೊತ್ಸವದ ಅದ್ದೂರಿಯಾಗಿ ಕೈಗೊಳ್ಳುವುದಾಗಿ ಮಠದ ಭಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಸಂತೋಷ ಬಿಜಿ ಪಾಟೀಲ




