Ad imageAd image

ಅಂಗನವಾಡಿ ಕೇಂದ್ರದೊಳಗೆ ಮಳೆ ನೀರು

Bharath Vaibhav
ಅಂಗನವಾಡಿ ಕೇಂದ್ರದೊಳಗೆ ಮಳೆ ನೀರು
WhatsApp Group Join Now
Telegram Group Join Now

  ——————————————————ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಗ್ರಾಮಸ್ಥರ ಮನವಿ

ಸೇಡಂ: ತಾಲೂಕಿನ ಸಿಲಾರಕೊಟ್ ಗ್ರಾಮದ ಅಂಗನವಾಡಿ ಕೇಂದ್ರ ೨ ರಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನೀರೆಲ್ಲ ಅಂಗನವಾಡಿ ಒಳಗೆ ನುಗ್ಗುತ್ತಿರುವ ದೃಶ್ಯ ಕಂಡುಬರುತ್ತಿದೆ.

ಇದಕ್ಕೆ ಕಾರಣ ಎರಡು ಭಾಗದ ಕಡೆ ಸಿಸಿ ರಸ್ತೆ ಮುಗಿಸಿ ಮಧ್ಯಭಾಗದಲ್ಲಿ ಬಿಟ್ಟಿರುವುದರಿಂದ ಇನ್ನಷ್ಟು ನೀರು ಹೆಚ್ಚಾಗಿ ಬರುತ್ತಿವೆ ಬಸ್ ನಿಲ್ದಾಣದಿಂದ ಸಿಸಿ ರಸ್ತೆ ಹಾಕಿದರೆ ಆದರೆ ಅದು ಪೂರ್ಣಗೊಳಿಸದೆ ಮದ್ಯದಲ್ಲಿ ಬಿಟ್ಟಿದ್ದಾರೆ ಅದರಿಂದ ಆ ರಸ್ತೆಯ ನೀರು ಸಂಪೂರ್ಣವಾಗಿ ಅಂಗನವಾಡಿ ಕೇಂದ್ರದ ಕಡೆ ಬರುತ್ತಿವೆ ಹಾಗೆ ಅಂಗನವಾಡಿ ಎದುರಲ್ಲಿ ರಸ್ತೆ ತುಂಬಾ ಹದೆಗೆಟ್ಟಿರುತ್ತದೆ ಅದರಿಂದ ಸಾರ್ವಜನಿಕರಿಗೆ ತಿರುಗಾಡಲು ತುಂಬಾ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಸಿಸಿ ರಸ್ತೆ ಸುಧಾರಣೆ ಮಾಡುವ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರ ಮನವಿ ಆಗಿದೆ.

ಸಿಸಿ ರಸ್ತೆ ಸುಧಾರಣೆ ಮಾಡಲು ಎಲ್ಲಾ ಸಿದ್ಧತೆ: ಇದರ ಕುರಿತು ಈ ಹಿಂದೆ ನಡೆದಿರುವ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸಿಸಿ ರಸ್ತೆ ಹಾಕಿಸಿ ಅಂಗನವಾಡಿ ಕೇಂದ್ರಕ್ಕೆ ಯಾವುದೇ ತೊಂದರೆ ಇಲ್ಲದಂತೆ ಮಾಡುವ ಸಿದ್ಧತೆ ನಡೆದಿದೆ.

ಸಿಸಿ ರಸ್ತೆ ಹಾಕುವ ಮೊದಲೇ ಅಂಗನವಾಡಿ ಕೇಂದ್ರದ ಮುಂದೆ ಎತ್ತರದ ಕಟ್ಟಡ ನಿರ್ಮಾಣ ಮಾಡಿದರೆ ಅದು ಮಕ್ಕಳಿಗೆ ತೊಂದರೆ ಆಗುವ ಸಾದ್ಯತೆ ಇದೆ ಅದ ಕಾರಣ ಆದಷ್ಟು ಬೇಗ ಕ್ರಮ ಕೈಗೊಂಡು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತವೆ ಎಂದು ಮೆದಕ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಡಾ.ಮಧುಸೂಧನ್ ರೆಡ್ಡಿ ಪಾಟೀಲ್ ಹೇಳಿದರು.

ಸದ್ಯ ಪರಿಸ್ಥಿತಿಗೆ ತಕ್ಕ ಕ್ರಮ:  ಸಿಸಿ ರಸ್ತೆಗೆ ಬಡ್ಜೆಟ್ ಬರುವುದು ಸ್ವಲ್ಪ ತಡವಾಗುವ ಸಾದ್ಯತೆ ಇರುವುದರಿಂದ ಸದ್ಯ ಇಟ್ಟಗಿಯಿಂದ ಸಣ್ಣ ಪ್ರಮಾಣದ ಗೋಡೆ ನಿರ್ಮಿಸಿ ನೀರು ಒಳಗಡೆ ಹೋಗದಂತೆ ಮಾಡಿಕೊಡುತ್ತೇವೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ರಾಮಪ್ಪ ಅವರು ತಿಳಿಸಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!