———–ಸಾಂಸ್ಕೃತಿಕ, ಕ್ರೀಡೆ, ಇ ಎಲ್ ಸಿ ರೇಂಜರ್ ಮತ್ತು ರೋವರ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ
ರಾಮದುರ್ಗ: ಪ್ರತಿಭೆ ಹಾಗೂ ಪಾಂಡಿತ್ಯ ಇವುಗಳು ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖ ಪಾತ್ರವಾಗಿವೆ. ಸಾಂಸ್ಕೃತಿಕ, ಕ್ರೀಡೆ ಶಿಕ್ಷಣದ ಮುಖ್ಯ ಅಂಗವಾಗಿದ್ದು,ಇವುಗಳಲ್ಲಿ ಭಾಗವಹಿಸಿ ಉನ್ನತ ಸ್ಥಾನಗಳಲ್ಲಿ ಹೊರಹೊಮ್ಮಲು ಯಶಸ್ಸು ಸಾಧಿಸಲು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವನ್ನು ಪಡೆದುಕೊಳ್ಳಬೇಕು ಎಂದು ಪ್ರಾಧ್ಯಾಪಕರು ಜನಪದ ವಿದ್ವಾಂಸರು ಹಾಗೂ ಜಾನಪದ ಪ್ರಪಂಚ ಪ್ರಶಸ್ತಿ ವಿಜೇತರು ಶ್ರೀಮತಿ ಆಯ್ ಎಸ್ ಯಾದವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಮದುರ್ಗ ಇವರು ತಾಲೂಕಿನ ಸುರೇಬಾನ-ಮನಿಹಾಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಇ ಎಲ್ ಸಿ ರೇಂಜರ್ ಮತ್ತು ರೋವರ್ ಕಾರ್ಯಕ್ರಮಗಳ ಉದ್ಘಾಟಿಸಿ ಮಾತನಾಡಿದರು.

ಪಾಂಡಿತ್ಯ ಓದಿನ ಮೂಲಕ ಒಲಿದು ಬಂದರೆ, ಪ್ರತಿಭೆ ಹುಟ್ಟಿನ ಮೂಲಕ ಬೆಳೆದು ಬಂದಿರುತ್ತದೆ. ಪ್ರತಿಭೆ ಮತ್ತು ಪಾಂಡಿತ್ಯಗಳೆರಡು ಸಂಗಮಿಸಿಕೊಂಡ ವ್ಯಕ್ತಿ ಜಗತ್ತಿಗೆ ಅಪರೂಪದ ಶಕ್ತಿಯಾಗಿ ಬೆಳೆಯುತ್ತಾನೆ. ವಿದ್ಯಾರ್ಥಿಗಳು ಸತತ ಪರಿಶ್ರಮದ ಓದಿನ ಮೂಲಕ ಪಾಂಡಿತ್ಯವನ್ನು ಸಂಪಾದಿಸಿ, ಜನ್ಮತ ನಿಮ್ಮೊಳಗೆ ಹುದುಗಿರುವ ಪ್ರತಿಭೆಯನ್ನು ಗುರುವಿನ ಮೂಲಕ ಗುರುತಿಸಿಕೊಂಡು, ಅವೆರಡನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯೋದಕ್ಕೆ ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಂಡು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಪ್ರವೀಣಕುಮಾರ ಕೋಟಿ ಅವರು ಪ್ರಾಸ್ತಾವಕವಾಗಿ ಮಾತನಾಡಿ ಮಹಾವಿದ್ಯಾಲಯದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ, ಕ್ರೀಡೆಗಳನ್ನು ಹಮ್ಮಿಕೊಂಡಿರುತ್ತೇವೆ ಜೊತೆಗೆ ವಿವಿಧ ಕಾರ್ಯಾಗಾರಗಳನ್ನು ಹಮ್ಮಿಕೊಂಡು ವಿಶೇಷ ಭೋದನೆಗಳನ್ನು ಏರ್ಪಡಿಸಲಾಗಿರುತ್ತದೆ. ಪದವಿ ಪೂರ್ವ ಕಾಲೇಜುಗಳ ಇ ಎಲ್ ಸಿ ಕ್ಲಬ್ ನ ಅತ್ಯುತ್ತಮ ಇ ಎಲ್ ಸಿ ಕ್ಲಬ್ ಎಂದು ಜಿಲ್ಲಾಧಿಕಾರಿಗಳು ಪ್ರಶಸ್ತಿಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ರಮೇಶ ಮೋಟೆ ಅವರು ಶಿಕ್ಷಣದ ಜೊತೆಗೆ ವಿವಿಧ ರೀತಿಯ ಕೌಶಲ್ಯ ಹಾಡು,ಭಾಷಣ,ಕ್ರೀಡೆ, ಜನಪದ ಇನ್ನೂ ಅನೇಕ ರಂಗಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಅವುಗಳನ್ನು ಉತ್ತಮ ರೀತಿಯಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಾಧನೆ ಮಾಡಬಹುದು ಎಂದರು
ಪ್ರಾಚಾರ್ಯರಾದ ನಾಗರಾಜ ಹಕ್ಕೇರ ಅವರು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಉತ್ತಮ ರೀತಿಯಲ್ಲಿ ಸತತವಾಗಿ ಅಭ್ಯಾಸ ಮಾಡುವ ಮೂಲಕ ಸಾಧನೆ ಮಾಡಲು ಸಾಧ್ಯ ಇದರಿಂದ ತಂದೆ ತಾಯಿ ಗುರುಗಳ ಮಹಾವಿದ್ಯಾಲಯದ ಹೆಸರು ತಂದು ಒಳ್ಳೆಯ ಸುಸಂಸ್ಕೃರಾಗಿ ಹೊರಹೊಮ್ಮಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕಾಲೇಜು ಸಮಿತಿ ಸದಸ್ಯರುಗಳಾದ ರೂಪಾ ಯಲಗೋಡ, ಶಿವಾನಂದ ಮೇಟಿ, ಮಂಜುನಾಥ ಪಾಟೀಲ, ಹಾಗೂ ಉಪನ್ಯಾಸಕರಾದ ರಮೇಶ ಬಡಿಗೇರ, ರಮೇಶ ಮೋಟೆ, ಈಶಪ್ಪ ಸರ್, ಸಾವಿತ್ರಿ ಪಾಟೀಲ, ಎಸ್ ಬಿ ಪಾಟೀಲ, ಪ್ರಕಾಶ ವಡ್ಡರ,ಭೋಧಕೇತರು ಮಹಾಲಕ್ಷ್ಮೀ ಮುನವಳ್ಳಿಮಠ, ಪತ್ರಕರ್ತರು ಕುಮಾರ ಮಾದರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ರಮೇಶ ಬಡಿಗೇರ ಸ್ವಾಗತಿಸಿದರು, ಡಾ.ಅಶ್ವಿನಿ ಟಿ.ಜಿ ನಿರೂಪಿಸಿದರು, ಈಶಪ್ಪ ಸರ್ ವಂದಿಸಿದರು.
ವರದಿ: ಕುಮಾರ ಎಂ




