ಅಹಮದಾಬಾದ್ : ಭಾರತದಲ್ಲಿ ಉಗ್ರರ ಬೇಟೆ ಮುಂದುವರೆದಿದೆ. ಗುಜರಾತ್ ರಾಜ್ಯದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಅಲ್ ಖೈದಾ ಜೊತೆ ಸಂಪರ್ಕ ಹೊಂದಿರುವ ನಾಲ್ವರು ಉಗ್ರರನ್ನು ಅರೆಸ್ಟ್ ಮಾಡಿದೆ.
ಅಮೆರಿಕದಿಂದ ಹತನಾದ ಜಾಗತಿಕ ಉಗ್ರ ಒಸಾಮಾ ಬಿನ್ ಲಾಡೆನ್ನ ಅಲ್ ಖೈದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಭಾರತೀಯ ಉಪಖಂಡದ ಅಲ್ ಖೈದಾ ಎಂಬ ಸಂಘಟನೆಗೆ ಸೇರಿದ ನಾಲ್ವರು ಭಯೋತ್ಪಾದಕರನ್ನು ಗುಜರಾತ್ ಎಟಿಎಸ್ ಬಂಧಿಸಿದೆ.
ಇಬ್ಬರು ಉಗ್ರರನ್ನ ಗುಜರಾತ್ನಿಂದ, ಒಬ್ಬನನ್ನು ದೆಹಲಿಯಿಂದ ಹಾಗೂ ಮತ್ತೊಬ್ಬನನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ. ಬಂಧಿತ ಭಯೋತ್ಪಾದಕರನ್ನು ಮೊಹಮ್ಮದ್ ಫರ್ದೀನ್, ಸೈಫುಲ್ಲಾ ಖುರೇಷಿ ಮತ್ತು ಮೊಹಮ್ಮದ್ ಫೈಕ್ ಎಂದು ಗುರುತಿಸಲಾಗಿದೆ.
ಗುಜರಾತ್ ಎಟಿಎಸ್ ಬಲೆಗೆ ಬಿದ್ದ ಎಲ್ಲಾ ನಾಲ್ವರು ಉಗ್ರರು 20 ರಿಂದ 25 ವರ್ಷದೊಳಗಿನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉಗ್ರರು ಭಾರತದಲ್ಲಿ ದಾಳಿಗಳಿಗೆ ಕುತಂತ್ರ ಮಾಡುತ್ತಿದ್ದರು ಎನ್ನಲಾಗಿದೆ




