ಮ್ಯಾಂಚೆಸ್ಟರ್ (ಇಂಗ್ಲೆಂಡ್): ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಇಂದಿಲ್ಲಿ ಆರಂಭವಾದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಭೋಜನ ವಿರಾಮದ ನಂತರದ ಆಟದಲ್ಲಿ 3 ವಿಕೆಟ್ ಗೆ 145 ರನ್ ಗಳಿಸಿತ್ತು.
ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ಪರವಾಗಿ ಸರದಿ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್. ರಾಹುಲ್ ಮೊದಲ ವಿಕೆಟ್ ಗೆ 94 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಯಶಸ್ವಿ ಜೈಸ್ವಾಲ್ 58 ( 107 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ಕೆ.ಎಲ್. ರಾಹುಲ್ 46 (98 ಎಸೆತ, 4 ಬೌಂಡರಿ) ಉತ್ತಮವಾಗಿ ಆಡಿದರು.
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ಶುಭಮಾನ್ ಗಿಲ್ ಮಾತ್ರ 12 ರನ್ ಗಳಿಸಿ ಬೆನ್ ಸ್ಟೋಕ್ ಗೆ ವಿಕೆಟ್ ಒಪ್ಪಿಸಿದರು. ಕನ್ನಡಿಗ ಕರುಣ್ ನಯ್ಯರ ಸ್ಥಾನದಲ್ಲಿ ಆಡಲು ಬಂದ ಸಾಯಿ ಸುದರ್ಶನ್ 25 ರನ್ ಗಳಿಸಿ ಹಾಗೂ ರಿಷಬ್ ಪಂತ್ 2 ರನ್ ಗಳಿಸಿ ಕ್ರೀಸ್ ಬಳಿ ಇದ್ದರು.




