ಬಸ್ ಪ್ರಯಾಣ ಕಂಡಕ್ಟರ್ ಜೊತೆ ಅವಮಾನ
ಗುರುಮಾಠಕಲ್ : ನಮ್ಮ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಸಿಬ್ಬಂದಿ ಅವರಿಗೆ ಕೆಲ ಸಿಬ್ಬಂದಿ ಯವರಿಗೆ ಪ್ರಯಾಣಿಕರೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ಪಾಠ ಹೇಳಿಕೊಡುವ ಅಗತ್ಯ ಇದೆ.
ಸರಕಾರ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಉಚಿತ ಮಹಿಳೆಯರಿಗೆ ಸಾರಿಗೆ ಪ್ರಯಾಣ ಮಾಡಿದಾಗಿನಿಂದ ಮಹಿಳೆಯರಿಗೆ, ಇನ್ನೂ ಶಾಲಾ ಪಾಸ್ ಹೊಂದಿರುವ ಮಕ್ಕಳಿಗೆ, ಅಂಗವಿಕಲರಿಗೆ, ಮಾಸಿಕ ಪಾಸ್ ಪಡೆದು ಪ್ರಯಾಣಿಸುವ ಪ್ರಯಾಣಿಕರು ಕಂಡಕ್ಟರ್ ಗಳ ಪಾಲಿಗೆ ಅದು ಹ್ಯಾಗೆ ಕಾಣುತ್ತಾರೋ ಗೊತ್ತಿಲ್ಲ, ಮರ್ಯಾದೆ ಕೊಡಲ್ಲ ದಿನ ಒಂದಿಲ್ಲ ಒಂದು ಜಗಳ ಮಾಡಿಕೊಳ್ಳುವದು ಸಾಮಾನ್ಯವಾಗಿದೆ.
ಮುದ್ದೇಬಿಹಾಳ್ ನಿಂದ ಹೈದ್ರಾಬಾದ್ ಗೆ ಹೊರಡುವ ಬಸ್ ಕಂಡಕ್ಟರ್ ಅಸಭ್ಯ ವರ್ತನೆಗೆ ಮನನೊಂದ ಪ್ರಯಾಣಿಕರು ಇಂತವರಿಂದ ಸಾರ್ವಜನಿಕರು ಬೇಸತ್ತು ಖಾಸಗಿ ವಾಹನಗಳ ಕಡೆ ಮುಖ ಮಾಡಿದ್ದಾರೆ ಇಂತವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಮತ್ರಿಗಳು ಇಲ್ಲದಿದಲ್ಲಿ ಮುಂದಿನ ದಿನಗಳಲ್ಲಿ ಎಲ್ಲರ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತೆದೆ ಅಚ್ಚರ.
ಮುದ್ದೇಬಿಹಾಳ್ ಘಟಕದ ಬಸ್ ಸಂಖ್ಯೆ KA28 F2424 ಕಂಡಕ್ಟರ್ ಮಹಾಶಯ ಅದು ಯಾರ ಸಿಟ್ಟು ಗೊತ್ತಿಲ್ಲ ಎಲ್ಲಾ ಪ್ರಯಾಣಿಕರೊಂದಿಗೆ ಏಕಾಏಕಿ ಮಾತು ಮಾತಿಗೂ ಟಿಕೆಟ್ ಕೊಡುವ ನೆಪದಲ್ಲಿ ಅಸಭ್ಯವಾಗಿ ಮಾತಾನಾಡುವದು, ಏಕವಚನದಲ್ಲಿ ತುಂಬಾ ಒರಟಾಗಿ ಉತ್ತರಿಸುವದು ನಿಜಕ್ಕೂ ಬಸ್ ಪ್ರಯಾಣ ಮಾಡುವವರಿಗೆ ಮುಜುಗರ ಉಂಟಾಗಿದೆ, ಕೂಡಲೆ ಈ ಕುರಿತು ಕಂಡಕ್ಟರ್ ಅವರ ಮೇಲೆ ಕ್ರಮ ತೆಗೆದು ಕೊಂಡರೆ ಸಾರಿಗೆ ಸಂಸ್ಥೆ ಉದ್ದಾರ ಆಗುತ್ತೆ.
ವರದಿ : ರವಿ ಬುರನೋಳ್




