ಸಿರುಗುಪ್ಪ : ತಾಲೂಕಿನ ಹಚ್ಚೋಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಇಬಿ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣವು ಮಳೆ ಬಂದರೆ ಸಾಕು ಶಾಲಾ ಆವರಣ ಕೆಸರುಗದ್ದೆಯಂತಾಗಿ ಮಾರ್ಪಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ನಿತ್ಯ ನರಕಾಯತನೇ ಅನುಭವಿಸುತ್ತಿದ್ದಾರೆ.
ಇಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆ ಕಾರ್ಯ ನಿರ್ವಹಿಸುತ್ತಿದ್ದೇವೆ ಪ್ರತಿನಿತ್ಯವೂ ವಿದ್ಯಾರ್ಥಿಗಳು ಕಲಿಕೆಗಾಗಿ ಆಗಮಿಸುತ್ತಿದ್ದಾರೆ. ಮಳೆಯಿಂದ ಶಾಲಾ ಕೊಠಡಿಗಳಿಗೆ ಹೋಗುವುದಕ್ಕೆ ಅರಸಹಾಸ ಪಡುವಂತಾಗಿದೆ.
ಪ್ರಮುಖವಾಗಿ ಶಾಲಾ ಆವರಣದಲ್ಲಿ ನೀರು ತುಂಬಿಕೊಂಡು ಎಷ್ಟೋ ವಿದ್ಯಾರ್ಥಿಗಳು ಕಾಲು ಜಾರಿ ಬೀಳೋ ಮೂಲಕ ಮೈ ಕೈಗೆ ಪೆಟ್ಟು ಮಾಡಿಕೊಂಡಿರುವ ಘಟನೆಗಳು ಸಹ ನಡೆದಿದೆ.

ಮಳೆಯ ನೀರಿನ ಜೊತೆಯಲ್ಲಿ ಚರಂಡಿಗಳ ಕೊಳಚೆ ನೀರು, ಮಿಶ್ರಣವಾಗಿ ಶಾಲಾ ಆವರಣದಲ್ಲಿ ಸೇರುತ್ತಿದ್ದು ಇದರಿಂದ ಶಾಲಾ ಸುತ್ತಲೂ ಗಬ್ಬು ವಾಸನೆಯಿಂದ ಶಾಲಾ ಶಿಕ್ಷಕರು ಮತ್ತು ಮಕ್ಕಳು ಶಾಲೆಯಲ್ಲಿ ಕೂತು ಪಾಠ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಮಕ್ಕಳ ಶೈಕ್ಷಣಿಕ ಬದುಕನ್ನು ಕಿತ್ತುಕೊಳ್ಳುವಲ್ಲಿ ಆ ಸ್ವಚ್ಛತೆ ತಾಂಡವಾಡುತ್ತಿರುವುದು ವಿಪರ್ಯಾಸವೇ ಸರಿ.
ಇಲ್ಲಿನ ಅಸಚ್ಚತೆಯಿಂದ ರೋಷವಾಗಿರುವ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ತಕ್ಷಣ ಈ ಸಮಸ್ಯೆಯಿಂದ ಮುಕ್ತಿ ಕಾಣಿಸುವಂತೆ ಶಾಲಾ ಮಕ್ಕಳು ಆಗ್ರಹಿಸಿದ್ದಾರೆ.
ವರದಿ :ಶ್ರೀನಿವಾಸ ನಾಯ್ಕ




