ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಸತತವಾಗಿ ಧಾರಾಕಾರ ಮಳೆಯಿಂದ ಜನಜೀವನ ಅಸ್ವಸ್ಥಾಗಿದೆ ಮುಖ್ಯ ರಸ್ತೆಯಿಂದ ನಾಡಕಚೇರಿ ಹೋಗುವಂತ ರಸ್ತೆಯನ್ನು ಜಲ ವೃತ್ತಿಯಾಗಿ, ಜನಜೀವನ ಅಸ್ವಸ್ಥಗೊಂಡಿದೆ ನಾಡಕಚೇರಿ ಉರ್ದು ಶಾಲೆ ಕನ್ಯಾ ಶಾಲೆ ಹಾಗು ಜೆಸ್ಕಾಂ ಇಲಾಖೆ ಕಲ್ಪಿಸುವಂತಹ ರಸ್ತೆಯಾಗಿದ್ದು ಸಾರ್ವಜನಿಕರು ಓಡಾಡಲು ಪರದಾಡುತ್ತಿದ್ದಾರೆ.

ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಇಲಾಖೆಯವರು ಈ ರಸ್ತೆಗೆ ಚರಂಡಿ ವ್ಯವಸ್ಥೆ ಮಾಡಿದರೆ ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ ಹಾಗೂ ನೀರು ಹೋಗಲು ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಜೊತೆಗೆ ತೆಗ್ಗು ಪ್ರದೇಶ ಆಗಿರುವುದರಿಂದ ಎಲ್ಲಾ ಕಡೆಯಿಂದ ನೀರು ಬಂದು ಅಲ್ಲೇ ನಿಲ್ಲುತ್ತವೆ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದರೆ ಕಷ್ಟವಾಗುತ್ತೆ ಶಾಲೆ ಬಿಟ್ಟಾಗ ವಸತಿ ನಿಲಯಕ್ಕೆ ಹೋಗಬೇಕಾದರೆ ಸಾರ್ವಜನಿಕರು ನಾಡಕಚೇರಿ ನೀರಿನ ಒಳಗಡೆಯಿಂದ ಹೋಗಬೇಕಾಗಿದೆ ಅಕ್ಕ ಪಕ್ಕದಲ್ಲಿ ಮನೆ ಇರುವುದರಿಂದ ಸಾಂಕ್ರಾಮಿಕ ರೋಗ ಹರಡಲು ಸಾಧ್ಯವಾಗುತ್ತದೆ.
ಅದಕ್ಕಾಗಿ ತತಕ್ಷಣವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತಿ ಅಧ್ಯಕ್ಷರು ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವರದಿ: ಸುನಿಲ್ ಸಲಗರ




