Ad imageAd image

ನಮ್ಮ ಕರ್ನಾಟಕ ಸೇನೆಗೆ ನೂತನ ಪದಾಧಿಕಾರಿಗಳ ಆಯ್ಕೆ

Bharath Vaibhav
ನಮ್ಮ ಕರ್ನಾಟಕ ಸೇನೆಗೆ ನೂತನ ಪದಾಧಿಕಾರಿಗಳ ಆಯ್ಕೆ
WhatsApp Group Join Now
Telegram Group Join Now

ಸಿಂಧನೂರು : ಜುಲೈ 24 ರಂದು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಸೇನೆ ತಾಲೂಕ ಘಟಕದ ಅಧ್ಯಕ್ಷ ಅಂಬಿರಾಜ್ ಮ್ಯಾಕಲ್ ಮಾತನಾಡಿ ನಾಡಿನ ನೆಲ, ಜಲ, ಭಾಷೆ ಉಳಿವಿಗಾಗಿ ಮತ್ತು ಮಹಿಳೆಯರ ಪರವಾಗಿ ವಿದ್ಯಾರ್ಥಿಗಳ ಪರವಾಗಿ ಸಮಾಜದ ದಬ್ಬಾಳಿಕೆಯಿಂದ ನೊಂದ ಬೆಂದವರ ಪರವಾಗಿ ನಮ್ಮ ಸಂಘಟನೆಯಿಂದ ಪ್ರತಿಭಟನೆ ಮತ್ತು ಹೋರಾಟಗಳನ್ನು ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೇ ಎಂದು ಹೇಳುತ್ತ ತಾಯಿ ಭುವನೇಶ್ವರಿ ದೇವಿ ಆಶೀರ್ವಾದದೊಂದಿಗೆ ನನ್ನನ್ನು ನಮ್ಮ ಕರ್ನಾಟಕ ಸೇನೆಗೆ ತಾಲೂಕ ಅಧ್ಯಕ್ಷ ರನ್ನಾಗಿ ನೇಮಕ ಮಾಡಿರುವ ರಾಜ್ಯಾಧ್ಯಕ್ಷ ಬಸವರಾಜ ಪಡಕೋಟಿ ಅಣ್ಣ ನವರಿಗೂ ಹಾಗೂ ರಾಯಚೂರು ಜಿಲ್ಲಾ ಅಧ್ಯಕ್ಷ ಕೊಂಡಯ್ಯ ಕೆ. ಅಣ್ಣ ನವರಿಗೂ ತುಂಬು ಹೃದಯದ ಧನ್ಯವಾದಗಳು.

ನಮ್ಮ ಕರ್ನಾಟಕ ಸೇನೆ ಇಂದಿನವರೆಗೆ ಇದ್ದರುವ ಎಲ್ಲಾ ಪದಾಧಿಕಾರಿಗಳಿಗೆ ಮುಖ್ಯವಾಗಿ ತಿಳಿಸುವುದೇನೆಂದರೆ ನಮ್ಮ ಸಂಘಟನೆ ಹೆಸರೇಳಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ಮಾಡುವುದು ರೊಕ್ಕ ವಸೂಲಿ ಮಾಡುವುದು ಜನ ಸಾಮಾನ್ಯರ ಜೊತೆ ಜಗಳ ಮಾಡಿದವರಿಗೆ ಸಂಘಟನೆ ವಿರುದ್ಧ ಕೆಲಸ ಮಾಡಿದರೆ ಅವರನ್ನು ಸಂಘಟನೆಯಿಂದ ಹೊರ ತೆಗೆದು ಹಾಕಲಾಗುತ್ತದೆ  ಮತ್ತು ಅವರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಾದೆ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಹಾಗೂ ನಮ್ಮ ಕರ್ನಾಟಕ ಸೇನೆ ನಮ್ಮ ಎಲ್ಲಾ ತಾಲೂಕ ಪದಾಧಿಕಾರಿಗಳ ವತಿಯಿಂದ ತಿಂಗಳಿಗೊಂದು  ಬಡ ಕುಟುಂಬಕ್ಕೆ ಸೇವಾ ಕಾರ್ಯಕ್ರಮವನ್ನು ಸಂಘಟನೆಯಿಂದ ಕಡ್ಡಾಯವಾಗಿ ಮಾಡಲೇಬೇಕು ಎಂದು ಹೇಳುತ್ತಾ ನಮ್ಮ ಮೇಲೆ ನಂಬಿಕೆ ಆತ್ಮವಿಶ್ವಾಸ ಇಟ್ಟು ಈ ನಾಡಿನ ನೆಲ ಜಲ ಭಾಷೆ ಪರವಾಗಿ ಹೋರಾಟ ಮಾಡಲು ಬರುತ್ತಿರುವ ಅಂತಹ ನಮ್ಮ ತಾಲೂಕಿನ ಎಲ್ಲಾ ಪದಾಧಿಕಾರಿಗಳಿಗೂ ಬಂದಿರುವಂತಹ ಕನ್ನಡ ಅಭಿಮಾನಿಗಳಿಗೆ ತುಂಬು ಹೃದಯದಿಂದ ಧನ್ಯವಾದಗಳು  ಜೈ ಕರ್ನಾಟಕ ಮಾತೇ ಎಂದು ಹೇಳಿ ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಸಂಚಾಲಕ ಹುಸೇನ್ ಭಾಷಾ, ತಾಲೂಕ ಗೌರವಾಧ್ಯಕ್ಷ ಟಿ.ಲಿಂಗಪ್ಪ, ತಾಲೂಕ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಅಂಬಮಠ, ನಗರ ಯುವ ಘಟಕ ಅಧ್ಯಕ್ಷ ಫಕ್ರುದ್ದೀನ್, ತಾಲೂಕು ಯುವ ಘಟಕ ಅಧ್ಯಕ್ಷ ಸೈಯದ್ ಶಾಬಾಜ್, ತಾಲೂಕ ವಿದ್ಯಾರ್ಥಿ ಘಟಕ ಅಧ್ಯಕ್ಷ ವೀರಭದ್ರಯ್ಯ, ತಾಲೂಕು ಸಂಚಾಲಕ ಮುದಿಯಪ್ಪ, ಸೇರಿದಂತೆ ಇನ್ನೂ ಅನೇಕ ಪದಾಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!