Ad imageAd image

ಮಹಾರಾಷ್ಟ್ರದಲ್ಲಿ ಭಾರಿ ಮಳೆ : ಪುರಾತನ ಕೋಟೆ ಕುಸಿತ 

Bharath Vaibhav
ಮಹಾರಾಷ್ಟ್ರದಲ್ಲಿ ಭಾರಿ ಮಳೆ : ಪುರಾತನ ಕೋಟೆ ಕುಸಿತ 
WhatsApp Group Join Now
Telegram Group Join Now

ಮಹಾರಾಷ್ಟ್ರ : ಭಾರತದ ಇತಿಹಾಸದಲ್ಲಿ ಅನೇಕ ರಾಜ ಮಹಾರಾಜರು ಮಹಾರಾಷ್ಟ್ರವನ್ನು ಅಳಿರುವುದು ಎಲ್ಲರಿಗೂ ಗೊತ್ತೇ ಇದೆ, ಅಲ್ಲದೇ ಅನೇಕ ಕೊಡುಗೆಗಳನ್ನು ಕೂಡ ನೀಡಿದ್ದಾರೆ, ಅದರಂತೆ ಇದೀಗ ರಾಜಮಹಾರಾಜರು ನಿರ್ಮಿಸಿದ್ದ ಶತಮಾನಗಳಷ್ಟು ಹಳೆಯ ಕೋಟೆಯೊಂದು ಕುಸಿದಿದೆ.

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರ ಬಳಿಯ ಪ್ರಾಚೀನ ಕೋಟೆಯ ಒಂದು ಭಾಗ ದಿಢೀರ್ ಕುಸಿದಿದೆ. ಅದೃಷ್ಟವಶಾತ್, ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ವರದಿಯಾಗಿದೆ.

ಪುರಾತನ ಕೋಟೆಗೆ ಸರಿಯಾದ ನಿರ್ವಹಣೆ ಕೊರತೆಯಿಂದ ಹಾಗೂ ಈ ವರ್ಷ ಭಾರೀ ಮಳೆಯಿಂದಾಗಿ ಕೋಟೆ ದುರ್ಬಲಗೊಂಡು ಕುಸಿದಿದ್ದು, ಸದ್ಯ ಕೋಟೆ ಕುಸಿಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವರದಿಯ ಪ್ರಕಾರ, ಈ ಕೋಟೆಯು ರಾಜಾ ಜಯಸಿಂಗ್ ಆಳ್ವಿಕೆಯ ಕಾಲದ್ದಾಗಿದ್ದು, ಮಹಾರಾಷ್ಟ್ರದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ ಹೇಳಲಾಗಿದೆ. ಆದರೆ ಸರಿಯಾದ ನಿರ್ವಹಣೆಯಿಲ್ಲದ ಕಾರಣಕ್ಕೆ ಕೋಟೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಾನ್ ಮತ್ತು ಮಹೇಶ ನದಿಗಳ ಸಂಗಮದಲ್ಲಿ ನೆಲೆಗೊಂಡಿರುವ ಬಾಲಾಪುರ ಕೋಟೆಯು ಹಲವಾರು ಶತಮಾನಗಳ ಹಿಂದಿನ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಪ್ರಸ್ತುತ, ಕೋಟೆಯು ಉಪ-ವಿಭಾಗೀಯ ಅಧಿಕಾರಿ (SDO), ತಹಶಿಲ್ ಕಚೇರಿ ಮತ್ತು ಪಂಚಾಯತ್ ಸಮಿತಿ ಸೇರಿದಂತೆ ಪ್ರಮುಖ ಆಡಳಿತ ಕಚೇರಿ ಆಡಳಿತದಲ್ಲಿದೆ.

ಪ್ರತಿದಿನ ನೂರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಆದಾಗ್ಯೂ, ಕುಸಿದ ವಿಭಾಗವು ಕೋಟೆಯ ಖಾಲಿ ಪ್ರದೇಶದಲ್ಲಿತ್ತು ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಕೋಟೆಯ ಬಗ್ಗೆ ದುರ್ಬಲ ಸ್ಥಿತಿಯ ಬಗ್ಗೆ ಪುರಾತತ್ತ್ವ ಶಾಸ್ತ್ರ ಇಲಾಖೆಯ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಕ್ರಮಕೈಗೊಳ್ಳಲಾದ ಹಿನ್ನಲೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!