————————————————————-ಪಾಕ್ ಗೆ ಕಡೆಯ ಪಂದ್ಯದಲ್ಲಿ ಸಮಾಧಾನಕರ ಗೆಲುವು
ಢಾಕಾ( ಬಾಂಗ್ಲಾದೇಶ): ಪ್ರವಾಸಿ ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯವನ್ನು 74 ರನ್ ಗಳಿಂದ ಸುಲಭವಾಗಿ ಗೆದ್ದುಕೊಂಡಿತು.
ಶೆರೆ ಬಾಂಗ್ಲಾ ನ್ಯಾಷಿನಲ್ ಕ್ರೀಡಾಂಗಣದಲ್ಲಿ ಮುಗಿದ ಮೂರು ಪಂದ್ಯಗಳ ಸರಣಿಯ ಕಡೆಯ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಿತಾದರೂ ಸರಣಿಯನ್ನು ಬಾಂಗ್ಲಾದೇಶ ತಂಡವೇ 2-1 ರಿಂದ ಪಡೆಯಿತು. ಇದರೊಂದಿಗೆ ಬಾಂಗ್ಲಾದೇಶ ತಂಡಕ್ಕೆ ಇದು ಸತತ ಎರಡನೇ ಟ್ವೆಂಟಿ-20 ಸರಣಿ ಗೆಲುವಾಗಿದೆ. ಇದಕ್ಕೆ ಮುನ್ನ ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿಯನ್ನು ಜಯಿಸಿತ್ತು. ಹೀಗಾಗಿ ಚುಟುಕು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಿಡಿತ ಸಾಧಿಸುವತ್ತ ದಾಪುಗಾಲು ಹಾಕುತ್ತಿದೆ. ಬಾಂಗ್ಲಾದೇಶ ತಂಡದ ಜಾಕರ್ ಅಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.




