ವಿಜಯಪುರ: ರಾಜ್ಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಆಕ್ಟೀವ್ ಆಗಿದೆ. ವಿಜಯಪುರದಲ್ಲಿ ಕೈಯಲ್ಲಿ ಮಾರಕಾಸ್ತ್ರಗಳ್ನು ಹಿಡಿದು ಚಡ್ಡಿ ಗ್ಯಾಂಗ್ ಓಡಾಡುತ್ತಿರುವುದು ಕಂಡು ಬಂದಿದೆ.
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದೆ. ಈ ಹಿಂದೆಯೂ ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದ ಚಡ್ಡಿ ಗ್ಯಾಂಗ್ ಈಗ ಮತ್ತೆ ಆತಂಕ ಮೂಡಿಸಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಗಣೇಶ ನಗರದಲ್ಲಿ ಚಡ್ಡಿಗ್ಯಾಂಗ್ ಕಳ್ಳರು ಓಡಾಟ ನಡೆಸಿದ್ದಾರೆ. ಕೈಯಲ್ಲಿ ಮಾರಕಾಸ್ತ್ರಗಳ್ನು ಹಿಡಿದು ಖದೀಮರು ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಂಗಿ, ಬನಿಯನ್, ಚಡ್ಡಿ, ಮುಖಕ್ಕೆ ಮಾಸ್ಕ್ ಧರಿಸಿ ಎಂಟ್ರಿ ಕೊಟ್ಟಿರುವಂತ ಕಳ್ಳರು, ವಿಜಯಪುರದ ತಾಳಿಕೋಟೆಯ ಗಣೇಶನಗರದ ಮನೆಯೊಂದರಲ್ಲಿ ಕಳ್ಳತನಕ್ಕೂ ಯತ್ನಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.




