ರೋಣ : ರೋಣ ತಾಲೂಕಿನ ಹಿರೇಮಮಣ್ಣೂರ ಗ್ರಾಮ ಅಭಿವೃದ್ಧಿಯತ್ತ ಸಾಗಿದೆ ಮತ್ತು 2013-2018ರವರೆಗೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ರೋಣ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮತ್ತು ರಸ್ತೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಮುಂದೆ ಬಂದ ಸರ್ಕಾರ ಅವರ ಅವಧಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಜಾರಿಗೆ ಬಂದು ಅಭಿವೃದ್ಧಿ ಹೆಸರಿನಲ್ಲಿ ರಸ್ತೆಗಳನ್ನು ಒಡೆದು ಪೈಫೈನ್ ಅಳವಡಿಕೆ ಮಾಡಿ ಮುಂದೆ ಅವುಗಳನ್ನು ಸಮರ್ಪಕವಾಗಿ ಮುಚ್ಚದೆ ಅರ್ಧಂಬರ್ಧ ಕಾಮಗಾರಿ ಮಾಡಿದ್ದರಿಂದ ಮನೆ ಮನೆಗೆ ನೀರು ಸರಬರಾಜು ಸಹ ಆಗಲಿಲ್ಲ ನಮ್ಮ ಸರ್ಕಾರ ಮಾಡಿದ್ದ ಸಿಸಿ ರಸ್ತೆಗಳನ್ನು ಸಹ ಒಡೆದು ಹಾಳು ಮಾಡಲಾಯಿತು ಇದರಿಂದ ಈಗ ಮತ್ತೆ ಆ ರಸ್ತೆಗಳನ್ನು ದುರಸ್ತಿ ಮಾಡುವುದರೊಂದಿಗೆ ಗ್ರಾಮೀಣ ಭಾಗದ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಶಾಸಕ ಜಿ ಎಸ್ ಪಾಟೀಲ್ ಹೇಳಿದರು, ಅವರು ರೋಣ ತಾಲೂಕಿನ ಗ್ರಾಮದಲ್ಲಿ ವಿಶೇಷ ಹಿರೇಮಣ್ಣೂರು ಮುಖ್ಯಮಂತ್ರಿಗಳ ಅನುದಾನದಡಿ 25 ಲಕ್ಷ ರೂಪಾಯಿ ಅನುದಾನದಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಮಾತನಾಡಿದರು.

ಅಭಿವೃದ್ಧಿಗೆ ಸ್ಥಳೀಯ ಸಾರ್ವಜನಿಕರ ಸಹಕಾರ ಅವಶ್ಯವಿದ್ದು ಸ್ಥಳೀಯರು ಕಾಮಗಾರಿಗಳನ್ನು ಉತ್ತಮ ರೀತಿಯಲ್ಲಿ ಮಾಡಿಸಿಕೊಳ್ಳಬೇಕು, ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದ್ದು ರಾಜ್ಯದ ಜನತೆಗಾಗಿ ಸಿದ್ದರಾಮಯ್ಯನವರ ಸರ್ಕಾರ 53 ಸಾವಿರ ಕೋಟಿ ರೂಪಾಯಿಯನ್ನು ವೆಚ್ಚ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಈಗಾಗಲೇ ರಾಜ್ಯದಲ್ಲಿ ಐದು ನೂರು ಕೋಟಿ ಟಿಕೆಟ್ಗಳನ್ನು ಉಚಿತ ಬಸ್ ಪ್ರಯಾಣಕ್ಕಾಗಿ ಮಹಿಳೆಯರಿಗಾಗಿ ನೀಡಲಾಗಿದೆ.
ಹಿರೇಮಣ್ಣೂರು ಮಹಿಳೆಯರಿಗೆ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯಕ್ಕಾಗಿ ಜಾಗ ಅವಶ್ಯವಿದ್ದು ಗ್ರಾಮಸ್ಥರು ಜಾಗವನ್ನು ನೀಡಲು ಮುಂದೆ ಬಂದರೆ ಸರ್ಕಾರದಿಂದ ಶೌಚಾಲಯಕ್ಕೆ ಅನುದಾನ ಬಿಡುಗಡೆ ಮಾಡಲು ತಕ್ಷಣ ಕ್ರಮ ಕೈಗೊಳ್ಳುತ್ತೇನೆ, ಅಭಿವೃದ್ಧಿಗೆ ಜನರ ಸಹಕಾರವು ಮುಖ್ಯವಾಗಿದ್ದು ಮುಂದಿನ ದಿನಮಾನಗಳಲ್ಲಿ ಗ್ರಾಮಕ್ಕೆ ಹಾಗೂ ಗ್ರಾಮೀಣ ಭಾಗಕ್ಕೆ ಹಂತ ಹಂತವಾಗಿ ಅವಶ್ಯಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಡಕ್ಷರಯ್ಯ ಹಿರೇಮಠ, ಶರಣಪ್ಪ ಕುರಿ,ಮಂಜುನಾಥ ಹೂವಿನಹಾಳ ಕೂಡ್ಲೆಪ್ಪಗೌಡ ಪ್ಯಾಟಿಗೌಡ್ರ, ರಾಮಣ್ಣ ಕುರಿ, ಶಂಕರಗೌಡ ಪಾಟೀಲ, ಧರ್ಮಗೌಡ ಪಾಟೀಲ, ಬಸವರಾಜ ನವಲಗುಂದ, ಯೂಸುಫ್ ಇಟಗಿ, ಮುತ್ತಪ್ಪ ಸೂಡಿ, ಶಿವಪ್ಪ ಪಟ್ಟೇದ, ಚನ್ನಬಸಯ್ಯ ಪುರಾಣಿಕಮಠ, ಬಸವರಾಜ ಕಾತರಕಿ, ವಿಶಾಲಾಕ್ಷಿ ಪ್ಯಾಟಿಗೌಡ್ರ, ಮಲ್ಲನಗೌಡರ ಪರಡ್ಡಿ ಸೇರಿದಂತೆ ಅನೇಕರಿದ್ದರು.




