ನಿರೂಪಕಿ, ನಟಿ ಜಾನ್ವಿ ಅವರು ಸದ್ಯ ಮದುವೆ ವಿಚಾರವಾಗಿ ಭಾರೀ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಡಿವೋರ್ಸ್ ಬಗ್ಗೆ ಮಾತನಾಡಿದ್ದರು. ಆ ಡಿವೋರ್ಸ್ ವಿಷಯ ಬೇರೆ ಸ್ವರೂಪ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಬಗ್ಗೆ ಜಾನ್ವಿ ಅವರು ದೂರು ನೀಡಿದ್ದಾರಂತೆ.
ನಾನು ಡಿವೋರ್ಸ್ ಕೊಟ್ಟ ಗಂಡ ಇವತ್ತು ಮದುವೆಯಾಗಿ ಮಗು ಮಾಡಿಕೊಂಡಿದ್ದಾನೆ. ನಾವು ಇವತ್ತಿಗೂ ಒಂಟಿಯಾಗಿದ್ದೇನೆ, ನನ್ನ ಆಸೆಗೆ ತಕ್ಕ ವರ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಐಷಾರಾಮಿ ಮನೆ ಬೇಕು, ಬಿಎಂಡಬ್ಲ್ಯೂ ಕಾರ್ ಬೇಕು, ರಾಜಕಾರಣಿಯಾಗಿದ್ದರೆ ತುಂಬ ಒಳ್ಳೆಯದು” ಎಂದು ಜಾನ್ವಿ ಹೇಳಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಪೋಸ್ಟ್ ಜಾನ್ವಿ ಗಮನಕ್ಕೆ ಬಂದಿದ್ದು, ಅವರೀಗ ದೂರು ನೀಡಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.
ನಿರೂಪಕಿ ಜಾನ್ವಿ ಅವರು ಕನ್ನಡ ಕೆಲ ಟಿವಿ ಮಾಧ್ಯಮಗಳಲ್ಲಿ ನಿರೂಪಕಿಯಾಗಿ ಕೆಲ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆ ಬಳಿಕ ಅವರು ʼನನ್ನಮ್ಮ ಸೂಪರ್‌ಸ್ಟಾರ್ʼ, ʼಗಿಚ್ಚಿ ಗಿಲಿಗಿಲಿʼ ಶೋನಲ್ಲಿಯೂ ಭಾಗವಹಿಸಿದ್ದರು. ಅದಾದ ಬಳಿಕ ರೂಪೇಶ್ ಶೆಟ್ಟಿ ಅವರ ʼಅಧಿಪತ್ರʼ ಸಿನಿಮಾದಲ್ಲಿಯೂ ನಟಿಸಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿದ್ದಾರಂತೆ.




