ಇಲಕಲ್: ಡಾ ಚನ್ನಮಲ್ಲ ಮಹಾಸ್ವಾಮಿಗಳು ಹಾಗೂ ನಂದವಾಡಗಿ ಹಿರಿಯ ಶ್ರೀಗಳಾದ ಮಹಾಂತಲಿಂಗ ಶಿವಾಚಾರ್ಯರು ಪ್ರಗತಿಪರ ರೈತರಾದ ಚನ್ನಪ್ಪಗೌಡ್ರ್ ನಾಡಗೌಡ್ರ, ಗ್ರಾಮ ಪ ಅಧ್ಯಕ್ಷ ಬಸವರಾಜ್ ಅಳ್ಳೊಳ್ಳಿ ಮಹಾತ್ಮರ ಜೀವನ್ ದರ್ಶನ,ಕಾರ್ಯಕ್ರವನ್ನು ಜ್ಯೋತಿ ಬೆಳೆಗಿಸುವದರ ಮೂಲಕ ಉದ್ಘಾಟನೆ ಮಾಡಿದರು.

ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಅಂಗವಾಗಿ ಪುರಾಣ ಪ್ರವಚನ ಕಾರ್ಯಕ್ರಮ ಪ್ರಾರಂಭಗೊಂಡಿತು. ಈ ಕಾರ್ಯಕ್ರಮದ ನೇತೃತ್ವ ವಹಿಸಿ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದ ನಂದವಾಡಗಿಯ ಹಿರಿಯ ಶ್ರೀಗಳಾದ ಡಾ ಮಹಾಂತಲಿಂಗ ಶಿವಾಚಾರ್ಯರು ಪ್ರತಿದಿನ ಮಹಾತ್ಮರ ಜೀವನವನ್ನ ಭಕ್ತಿಯಿಂದ ಆಲಿಸಿ ಮಹಾತ್ಮರ ನಡೆ ನುಡಿ ಆಚಾರ ವಿಚಾರಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂತುಸ್ಟಮವಾದ ಜೇವನ ನೆಡೆಸಿ ಎಂದು ಆಶೀರ್ವಚನ ನೀಡಿದರು.
ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ಈ ಸಲದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಹಾತ್ಮರ ಜೀವನ ದರ್ಶನವನ್ನು ಮಾಡಿಕೊಡಲಾಗುವುದು, ಭಕ್ತಿ ಹಾಗೂ ಶ್ರದ್ದೆಯಿಂದ ಶ್ರಾವಣ ಮಾಸದ ತಿಂಗಳ ಪರ್ಯಂತ ನೆಡೆಯುವ ಈ ಕಾರ್ಯಕ್ರಮ ದಲ್ಲಿ ಎಲ್ಲ ಭಕ್ತರು ಪಾಲ್ಗೊಂಡು ಮಹಾತ್ಮರ ಆದರ್ಶಗಳನ್ನ ಅನುಸರಿಸಿ ಉತ್ತಮವಾದ ಸಂಸ್ಕಾರಯುತ ಜೀವನ ನೆಡೆಸಿ ಎಂದು ಗ್ರಾಮದ ಸುವರ್ಣಗಿರಿ ಶ್ರೀ ರುದ್ರುಸ್ವಾಮಿಮಠದ ಡಾ ಚನ್ನಮಲ್ಲ ಮಹಾಸ್ವಾಮೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾಮದ ಪ್ರಗತಿಪರ ರೈತರಾದ ಚನ್ನಪ್ಪಗೌಡ್ರ ನಾಡಗೌಡ್ರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಗ್ರಾಮ ಪ ಅಧ್ಯಕ್ಷ ಬಸವರಾಜ್ ಅಳ್ಳೊಳ್ಳಿ ಉಪಸ್ಥಿತರಿದ್ದರು. ಶ್ರೀ ರುದ್ರುಸ್ವಾಮಿ ಮಹಿಳಾ ಅನುಭವ ಮಂಟಪದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಂಪಣ್ಣ ಸಜ್ಜನ ಸ್ವಾಗತಿಸಿದರು.
ಮಾಜಿ ತಾ ಪ ಅಧ್ಯಕ್ಷ ಮಹಾಂತೇಶ್ ಕಡಿವಾಲ ವಂದಿಸಿದರು, ಶಿಕ್ಷಕ ದೊಡ್ಡಬಸು ಮಲ್ಲಾಪುರ ನಿರೂಪಿಸಿದರು. ಗುರುವಿನಮಠ ಬಂಧುಗಳು ಪ್ರಸಾದ ವ್ಯವಸ್ಥೆ ಮಾಡಿದ್ದರು
ಈ ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಕ್ಕಳು ಮಹಿಳೆಯರು ಯುವಕರು ಹಿರಿಯರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ: ದಾವಲ್ ಶೇಡಂ




