ಬೆಂಗಳೂರು: ಭಾರತೀಯ ಸನಾತನ ಧರ್ಮದ ಹಿಂದೂ ಧರ್ಮದ ಉಳಿವಿಗಾಗಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ಭಾಯಿ ತೊಗಾಡಿಯಾ ಅವರು ಯಶವಂತಪುರದ ಆರ್ ಎಂ ಸಿ ಯಾರ್ಡ್ದಲ್ಲಿರುವ ಶ್ರೀ ವೀರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮಾನಚಾಲಿ ಮಂತ್ರ ಪಠಣ ಕೇಂದ್ರವನ್ನು ತೆರೆಯಲಾಗಿದೆ.
ಈ ದೇವಸ್ಥಾನ ಪ್ರತಿ ಮಂಗಳವಾರ ಮದ್ಯಾಹ್ನ ವಿಷೇಶ ಪೂಜೆ ಪುನಸ್ಕಾರ ಮಹಾಮಂಗಳಾರತಿ ಜರುಗುತ್ತದೆ ನಂತರ
ಸಾರ್ವಜನಿಕರಿಗೆ ಅನ್ನ ದಾನ ಮತ್ತು ಸಾಯಂಕಾಲದ ‘ಹನುಮಾನಚಾಲಿ ಮಂತ್ರ ಪಠಣ’ ವರ್ಗ ನಡೆಯುತ್ತವೆ. ನಂತರ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ ಎಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚೆಲುವರಾಜು ತಿಳಿಸಿದರು.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ. ಆನಂದ್ ಅವರು ಹನುಮಾನಚಾಲಿ ಕೇಂದ್ರಗಳನ್ನು ದೇಶದಾದ್ಯಂತ ಸ್ಥಾಪಿಸಿ ಅದರ ಮೂಲಕ ಮಂತ್ರದ ಪಠಣದ ಉದ್ದೇಶ ಮತ್ತು ಮಾನವನ ಧರ್ಮಕ್ಕೆ ಆಗುವ ಉಪಯೋಗಗಳು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಮುಖಂಡರು ಮಹಿಳೆಯರು ಕಾರ್ಯಕರ್ತರು ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




