Ad imageAd image

ಕೊಪ್ಪಳ ಬಲ್ದೊಟಾ ಕಂಪನಿ ಗುಂಡಾಗಳನ್ನು ಬಂಧಿಸಿ! ಸಿಪಿಐಎಂಎಲ್ ಆಗ್ರಹ

Bharath Vaibhav
ಕೊಪ್ಪಳ ಬಲ್ದೊಟಾ ಕಂಪನಿ ಗುಂಡಾಗಳನ್ನು ಬಂಧಿಸಿ! ಸಿಪಿಐಎಂಎಲ್ ಆಗ್ರಹ
WhatsApp Group Join Now
Telegram Group Join Now

ಸಿಂಧನೂರು : ಜುಲೈ 27, ಕೊಪ್ಪಳ ನಗರದ ಹತ್ತಿರ ಇರುವ ಬಸಾಪುರ ಕೆರೆಯಲ್ಲಿ ಜಾನುವಾರ ಮತ್ತು ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ರೈತರ ಮೇಲೆ ಮರಣಾಂತಿಕ ಹಲ್ಲೆ ಮಾಡಿದ ಎಂಎಸ್‌ಪಿಎಲ್ ಬಲ್ಡೊಟಾ ಕಂಪನಿ ಗೂಂಡಗಳನ್ನು ಬಂಧಿಸಿ ಕಂಪನಿಯ ಪರವಾನಿಗೆ ರದ್ದುಗೊಳಿಸಲು ಸಿಪಿಐಎಂಎಲ್ ಮಾಸ್ ಲೈನ್ ಹಾಗೂ ಕರ್ನಾಟಕ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ.

ಕಳೆದ ಎರಡು ವರ್ಷಗಳಿಂದ ಬಸಾಪುರ.ಹಾಲವರ್ತಿ ಇತರೆ ಗ್ರಾಮಗಳ ರೈತರು , ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟು ವಿನಂತಿಸಿದರೂ ಪ್ರಯೋಜನವಾಗಿಲ್ಲ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ 2009ರಲ್ಲಿ ಹೈಕೋರ್ಟಿನಲ್ಲಿ ದಾವೇ ಹೂಡಿ ನಿರಂತರ ಹೋರಾಟ ನಡೆಸುತ್ತೇವೆ ಕೆರೆಯನ್ನು ಜನ ಜಾನುವಾರಗಳಿಗೆ ಮುಕ್ತವಾಗಿಡಬೇಕೆಂದು ಹುಚ್ಚ ನ್ಯಾಯಾಲಯದ ಸೂಚನೆಯನ್ನು ಬಲ್ದೋಟ ಕಂಪನಿ ಸಂಪೂರ್ಣವಾಗಿ ಉಲ್ಲಂಘಿಸಿದೆ ಆದರೂ ಕೂಡ ರೈತರ ಮೇಲೆ ಹಲ್ಲೆ ಮಾಡಿದ್ದಾರೆ.

ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ ಕಂಪನಿಯ ಮಾಲೀಕರು ಮತ್ತು ಅವರ ಗೂಂಡಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಸಿಪಿಐಎಂಎಲ್ ಮಾಸ್ ಲೈನ್ ಹಾಗೂ ಕರ್ನಾಟಕ ರೈತ ಸಂಘ ಸಿಂಧನೂರು ತಹಶೀಲ್ದಾರ್ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ- ಜಿಲ್ಲಾ ಕಾರ್ಯದರ್ಶಿ ಬಿ ಎಂ. ಯರದಿಹಾಳ. ಚಿಟ್ಟಿಬಾಬು ಜಿಲ್ಲಾ ಕಾರ್ಯದರ್ಶಿ. ರಮೇಶ್ ಪಾಟೀಲ್ ಬೇರಗಿ ತಾಲೂಕ ಅಧ್ಯಕ್ಷರು. ಯಲ್ಲಪ್ಪ ಚಿಕ್ಕ ಬೇರಿಗೆ. ಶ್ಯಾಮಿದ್ ಸಾಬ್. ಮಹಮ್ಮದ್ ಹುಸೇನ. ದುರ್ಗಾ ಪ್ರಸಾದ್. ಅಸ್ಲಾಂ ಅನ್ವರ್ ಪಾಷಾ. ಈರೇಶಪ್ಪ. ಖಾದರ್ ಭಾಷಾ. ಬಸವರಾಜ ಆಟೋ.ಇನ್ನೂ ಅನೇಕರಿದ್ದರು

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!