
ರಶ್ಮಿಕಾ ಮಂದಣ್ಣ ಇಂದು ಹಿಂದಿ, ತಮಿಳು, ತೆಲಗು ಚಿತ್ರಗಳಲ್ಲಿ ಯಶಸ್ವಿಯಾಗಿ ಭರ್ಜರಿ ಹೆಸರು ಮಾಡಿದ್ದಾರೆ. ಸ್ಟಾರ್ ಹಿರೋಯಿನ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಮೊದಲು ಕನ್ನಡ ಸಿನೇಮಾದಲ್ಲಿ ನಟಿಸಿದ್ದಾರೆ. ಪೊಗರು, ಕಿರಿಕ್ ಪಾರ್ಟಿ ಮೂಲಕ ಕನ್ನಡದಲ್ಲೇ ತಮ್ಮ ಸಿನೇಮಾ ಡೆಬ್ಯೂ ಮಾಡಿರುವ ರಶ್ಮಿಕಾ ಮಂದಣ್ಣ ಈಗ ಕನ್ನಡ ಸಿನೇಮಾದಲ್ಲಿ ನಟಿಸುತ್ತಿಲ್ಲ.

ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೋದರೆ ಪೊಗರು ಚಿತ್ರದ ಬಳಿಕ ಲಾಕ್ ಡೌನ್ ಆಯಿತಂತೆ. ಆ ಕಾರಣ ಸಿನೇಮಾ ನಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ತದನಂತರ ತಮಿಳು, ತೆಲಗು ಹಾಗೂ ಹಿಂದಿ ಚಿತ್ರಗಳಲ್ಲಿ ಅವಕಾಶ ಸಿಕ್ಕಿತು.ಅವಕಾಶ ಪಡೆದು ಯಶಸ್ವಿಯಾಗಿದ್ದೇನೆ. ನಂತರ ಕನ್ನಡ ಸಿನೇಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿಲ್ಲ, ನಟಿಸಿಲ್ಲ ಅಷ್ಟೇ. ಅವಕಾಶ ಸಿಕ್ಕರೇ ನಟಿಸುತ್ತೇನೆ ಎಂದು ಜಾಣ್ಮೆಯಿಂದ ಉತ್ತಿರುಸುತ್ತಾರೆ ರಶ್ಮಿಕಾ ಮಂದಣ್ಣ.




