ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮುಂದುವರೆದ ಮಳೆ ಅಬ್ಬರ
ಮಳೆಯಿಂದಾಗಿ ಚಿಕ್ಕೋಡಿ ಉಪವಿಭಾಗದಲ್ಲಿ ಹಲವು ಅವಾಂಥರ ಸೃಷ್ಟಿ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ, ಚಿಕ್ಕೋಡಿಯಲ್ಲಿ ಜನರು ತತ್ತರ.
ಅಪಾಯಮಟ್ಟ ತಲುಪಿದ ಕೃಷ್ಣಾ ನದಿ.

ಕೃಷ್ಣಾ ನದಿಗೆ ಹರಿದು ಬರ್ತಿದೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು.
ಕಲ್ಲೋಳ ಗ್ರಾಮದ ದತ್ತ ಮಂದಿರ ಜಲಾವೃತ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮ.
ದೇವಸ್ಥಾನ ಜಲಾವೃತ ಹಿನ್ನೆಲೆ ಸ್ಥಗಿತಗೊಂಡ ಪೂಜಾ ಕೈಂಕರ್ಯ.
ಚಿಕ್ಕೋಡಿ ಉಪವಿಭಾಗದ ಎಂಟು ಕೆಳಹಂತದ ಸೇತುವೆಗಳು ಜಲಾವೃತ.
ನದಿ ಪಾತ್ರದ ಜಮೀನುಗಳಿಗೆ ನುಗ್ಗಿದ ಕೃಷ್ಣಾ ನದಿ ನೀರು.
ಪ್ರವಾಹದ ಭೀತಿಯಲ್ಲಿ ಕೃಷ್ಣಾ ತೀರದ ಜನರು.
ನದಿಗೆ ಇಳಿಯದಂತೆ ಜಿಲ್ಲಾಡಳಿತದಿಂದ ಕಚ್ಚೆಚ್ಚರ.
ವರದಿ: ರಾಜು ಮುಂಡೆ




