ಸೇಡಂ :ಎಸ್ಸಿಎಸ್ ಪಿ /ಟಿ.ಎಸ್.ಪಿ. ಅನುದಾನದಲ್ಲಿ 7ಸಿ ಅನ್ವಯ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಾ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮಾಡಿರುವ ವಂಚನೆಯನ್ನು ಅಂಬೇಡ್ಕರ್ ಯುವ ಸೇನೆ ಸೇಡಂ ತಾಲೂಕ ಅಧ್ಯಕ್ಷಾರದ ಗೋಪಾಲ ಎಲ್ ನಾಟೆಕಾರ್ ತೀವ್ರವಾಗಿ ಖಂಡಿಸಿದ್ದಾರೆ.
ಮುಖ್ಯಮಂತ್ರಿಸಿದ್ದರಾಮಯ್ಯನವರು 2023-24ನೇ ಸಾಲಿನಲ್ಲಿಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯಡಿಯಲ್ಲಿ 34.423 ಕೋಟಿ ರೂ. ಅನುದಾನ ಮತ್ತು 2025-26ನೇ ಸಾಲಿನಲ್ಲಿ 42,017.51 ಕೋಟಿ ರೂ. ಘೋಷಣೆ ಮಾಡಿ ಪರಿಶಿಷ್ಟಜಾತಿ ಮತ್ತು ವರ್ಗದ ಸಮಾಜವನ್ನು ಅಭಿವೃದ್ಧಿಗೊಳಿಸುವ ಆಶ್ವಾಸನೆ ನೀಡಿದ್ದರು.
ಆದರೆ ಈಗ ಸರ್ಕಾರದ 5 ಗ್ಯಾರಂಟಿಗಳಾದ ಅನ್ನಭಾಗ್ಯಕ್ಕೆ 1,670.76 ಕೋಟಿ, ಯುವ ನಿಧಿಗೆ 162 ಕೋಟಿ, ಶಕ್ತಿ ಯೋಜನೆಗೆ 1,537 ಕೋಟಿ, ಗೃಹ ಜೋತಿ ಯೋಜನೆಗೆ 2,626ಕೋಟಿಹಾಗೂ ಗೃಹಲಕ್ಷ್ಮಿಗೆ 7,438.08 ಕೋಟಿ ರೂ. ಒಟ್ಟು 11,896.84 ಕೋಟಿ
ರೂ.ಗಳನ್ನು ಬಳಕೆ ಮಾಡಲು ಸರ್ಕಾರ ಮುಂದಾಗಿರುವುದನ್ನು ಪತ್ರಿಕಾ ಹೇಳಿಕೆ ಮೂಲಕ ಅವರು ಖಂಡಿಸಿದ್ದಾರೆ. 2013 ರಿಂದ 2018ರವರೆಗೆ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯನ್ನು ಜಾರಿಗೆ ತಂದು ಈ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗಿತ್ತು. ಆದರೆ ದೊಡ್ಡ ಪ್ರಮಾಣದಲ್ಲಿ ಎಸ್‌ಸಿಎಸ್ ಪಿ/ಟಿಎಸ್‌ಪಿ ಹಣವನ್ನು ನಿಗದಿತ ಅಭಿವೃದ್ಧಿಯೋಜನೆಗಳಿಗೆ ಬಳಸದೆ ಅನ್ಯ ಬಾಬುಗಳಿಗೆ ವರ್ಗಾವಣೆ ಆದ ಪ್ರಕರಣದಲ್ಲಿ ಯಾರೊಬ್ಬ ಅಧಿಕಾರಿಗೂ ಶಿಕ್ಷೆ ಆಗಲಿಲ್ಲ ಎಂದು ಗೋಪಾಲ ನಾಟೆಕಾರ್ ಹೇಳಿದ್ದರೆ .
ವರದಿ :ವೆಂಕಟಪ್ಪ ಕೆ ಸುಗ್ಗಾಲ್




