ಚಡಚಣ :ತಾಲೂಕಿನಲ್ಲಿ ಅತಿ ಸಡಗರ ಸಂಭ್ರಮದಿಂದ ನಾಗರಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ವಿಷಶವಾಗಿ ಉತ್ತರ ಕರ್ನಾಟಕದಲ್ಲಿ ಮದುವೆಯಾದ ಹೆಣ್ಣುಮಕ್ಕಳನ್ನು ಹಬ್ಬಕ್ಕೆ ಕರೆದುಕೊಂಡು ಬರುವದು ವಾಡಿಕೆ, ಹೆಣ್ಣು ಮಕ್ಕಳು ಅತಿ ಸಂಬ್ರಮದಿಂದ ನಗಪಂಚಮಿ ಹಬ್ಬವನ್ನು ಆಚರಿಸುತ್ತಾರೆ, ಶ್ರಾವಣ ಮಾಸದ ಮೊದಲನೆಯ ಹಬ್ಬವಾದ ನಗರಪಂಚಮಿ ಚಡಚಣ ತಾಲುಕಿನದ್ಯಂತೆ ಶ್ರಾದ್ದ ಭಕ್ತಿಯಿಂದ ಆಚರಿಸಲಾಯಿತು.

ಬೆಳಗೆ ಎದ್ದು ಮಹಿಳೆಯರು ಮನೆಯ ಮುಂದೆ ರಂಗೋಲಿ ಹಾಕುವ ಮೂಲಕ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗಪಚಂಮಿಯನ್ನು ಅತಿ ಸಂಭ್ರಮದಿಂದ ಬರಮಡಿಕೊಳ್ಳುತ್ತಾರೆ ಮತ್ತು ಹೊಸ ಹೊಸ ಬಟ್ಟೆಗಳನ್ನು ಉಟ್ಟು ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಿ ನಗದೇವತೆಗೆ ಹಾಲು ಏರಿಯುತ್ತಾರೆ ಮತ್ತು ಗ್ರಾಮದ ಆದಿದೇವತೆಗಳಾದ ಶ್ರೀ ಸಂಗಮನಾಥ ದೇವಸ್ಥಾನ, ಹನುಮನ ದೇವಸ್ಥಾನ ಮತ್ತು ದುರ್ಗಾದೇವಿ ದೇವಸ್ಥಾನ,ನವಗ್ರಹ ದೇವಸ್ಥಾನಕ್ಕೆ ಹೋಗಿ ವಿಷೇಶ ಪೂಜೆಯನ್ನು ಸಲ್ಲಿಸುತ್ತಾರೆ ಮತ್ತು ತಮ್ಮ ಕುಟುಂಬದ ಎಲ್ಲ ಸದಸರಿಗೂ ಒಳ್ಳೆಯದಾಗಲೆಂದು ದೇವರಲ್ಲಿ ಪ್ರಾಥಿಸುತಾ ವಿಷಶ ಪೂಜೆಯನ್ನು ಸಲ್ಲಿಸುತ್ತಾರೆ .
ಮಹಿಳಿಯರು ಅತ್ಯಂತ ಸಂಭ್ರಮದಿಂದ ತಮ್ಮ ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಬಂಧು ಮಿತ್ರರ ಮನೆಗಳಿಗೆ ತೆರಳಿ ತಾವು ತಯಾರಿಸಿದ ಎಲ್ಲ ವಿಧದ ಖಾದ್ಯಗಳನ್ನು ಒಬ್ಬರಿಗೊಬ್ಬರು ಕೊಟ್ಟು ಮನೆಗಳಿಗೆ ತೆರಳಿ ಪೂಜೆ ಹಾಗೂ ಹಬ್ಬದದ ವಿಷೇಶ ಭೋಜನ ಮಾಡುತ್ತಾರೆ ಮನೆಯ ಹತ್ತಿರ ಮರಗಳಿಗೆ ಜೋಕಾಲಿ ಕಟ್ಟಿ ಎಲ್ಲೂರು ಜೋಕಾಲಿ ಜೇಕಿಕೊಂಡು ಸಂಭ್ರಮಿಸುತ್ತಾರೆ .
ವರದಿ :ಉಮಾಶಂಕರ ಕ್ಷತ್ರಿ




