ಚಡಚಣ: ಅಭಿನಂದನೆ, ಸನ್ಮಾನ, ಸತ್ಕಾರಗಳು ವ್ಯಕ್ತಿಗೆ ಪ್ರೋತ್ಸಾಹಿಸುವುದರ ಜತೆಗೆ ಸಾಧನೆ ಮಾಡಲು ಸಮಾಜಮುಖಿಯಾಗಲು ಪ್ರೇರಣೆ ನೀಡುತ್ತದೆ ಎಂದು ಪ್ರಜಾವಾಣಿ ಹಿರಿಯ ಪತ್ರಕರ್ತ ಅಲ್ಲಮಪ್ರಭು ಕರಜಗಿ ಹೇಳಿದರು.
ಚಡಚಣ ಪ್ರವಾಸಿ ಮಂದಿರದಲ್ಲಿ ತಾಲೂಕ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ್ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು ಹಲವಾರು ಅಡೆತಡೆಗಳನ್ನು ದಾಟಿಕೊಂಡು ಬಂದು ಸಾಧನೆ ಮಾಡಿದವರಿಗೆ ಯಾರೋ ಈ ರೀತಿ ಸನ್ಮಾನ ಮಾಡಿದಾಗ ಇನ್ನೂ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ ಮತ್ತು ಪ್ರಶಸ್ತಿ ಪಡೆದವರನ್ನು ನೋಡಿ ಯುವಜನರಿಗೂ ಸ್ಫೂರ್ತಿ ಬರುತ್ತದೆ. ಇದು ಶ್ಲಾಘನೀಯ ಕೆಲಸ ಎಂದು ಬಣ್ಣಿಸಿದರು.
ವಿಜಯ ಕರ್ನಾಟಕ ವರದಿಗಾರ ಮನೋಜಕುಮಾರ ಕಟಗೇರಿ ಮಾತನಾಡಿ ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ನಿರಂತರವಾದ ಪ್ರಯತ್ನ ಬಹಳ ಮುಖ್ಯ ಆ ನಿರಂತರ ಪ್ರಯತ್ನದ ಫಲವೇ ಇವತ್ತಿನ ಸಾಧಕರು.ಚಡಚಣ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪತ್ತೆ ಹಚ್ಚಿ ಸನ್ಮಾನ ಮಾಡುವ ಕಾರ್ಯಕ್ರಮ ನಿಜವಾಗಿಯೂ ಅನನ್ಯವಾದುದು ಮತ್ತು ಅರ್ಥ ಪೂರ್ಣವಾದುದು. ಯಾಕೆಂದರೆ ಈ ಸಾಧಕರನ್ನು ನಾನು ಸಮಾಜಕ್ಕೆ ಪರಿಚಯ ಮಾಡುವ ಮೂಲಕ ಸಾಧಕರಿಗೆ ನಾವು ಪ್ರೇರಣೆ ಕೊಡುತ್ತಿದ್ದೇವೆ ಪ್ರೋತ್ಸಾಹ ಕೊಡುತ್ತಿದ್ದೇವೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಟ್ಟಣ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಾಬಾಸಾಹೇಬ ತಾವಸೆ ಸಮಾಜವನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯ. ಪತ್ರಕರ್ತರು ಸಮಾಜದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾರೆ ಮತ್ತು ಸತ್ಯವನ್ನು ಜನರ ಮುಂದಿಡುತ್ತಾರೆ.ಸಮಾಜದಲ್ಲಿ ಜಾಗೃತಿ ಉಂಟಾಗುತ್ತದೆ ಎಂದರು. ಪಟ್ಟಣದಲ್ಲಿ ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವದಾಗಿ ಭರವಸೆ ನೀಡಿದರು.
ಜಿಲ್ಲಾ ಮಟ್ಟದ ಕಾನಿಪ ವಾರ್ಷಿಕ ಪ್ರಶಸ್ತಿ ಪಡೆದ ಪತ್ರಕರ್ತ ಶಿವಯ್ಯ ಮಠಪತಿ, ಬಸವ ಚೇತನ ಪ್ರಶಸ್ತಿ ಪಡೆದ ಪತ್ರಕರ್ತೆ ವಿದ್ಯಾ ಕಲ್ಯಾಣಶೆಟ್ಟಿ, ತಾಲೂಕು ನೌಕರರ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ಮಲ್ಲಾಡಿ, ಚಡಚಣ ತಾಲೂಕಿಗೆ ಪ್ರಥಮ ಸ್ಥಾನ ೬೧೯ ಅಂಕಗಳು ೯೯.೦೪% ಪಡೆದ ಕುಮಾರಿ. ಲಕ್ಮಿ. ಮನೋಜಕುಮಾರ. ಕಟಗೇರಿ, ದ್ವಿತೀಯ ಸ್ಥಾನ ೬೧೮ ಅಂಕಗಳು ೯೮.೮೮% ಪಡೆದ ಕುಮಾರಿ ಸ್ಫೂರ್ತಿ ಶಂಕರ ಹಾವಿನಾಳ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ. ಬಿರಾದಾರ ವಹಿಸಿದರು. ಮುಖ್ಯ ಅತಿಥಿ ಸ್ಥಾನವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಶಂಕರ ಹಾವಿನಾಳ, ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೊಣಜಮಠ, ಕಾರ್ಯದರ್ಶಿ ಶ್ರೀಕಾಂತ ಬಗಲಿ, ಖಜಾಂಚಿ ವಿನಯ ಜೀರಂಕಲಗಿ ಸೇರಿದಂತೆ ತಾಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.ರಮೇಶ ಮಲ್ಲಾಡಿ ಕಾರ್ಯಕ್ರಮ ನಿರೂಪಿಸಿದರು.
ವರದಿ :ಉಮಾಶಂಕರ ಕ್ಷತ್ರಿ




