ಸೇಡಂ: ಮೆದಕ್ ಗ್ರಾಮದಲ್ಲಿ ಶ್ರೀ ಚೆನ್ನಕೇಶವ ದೇವಾಲಯ, ಭೂತನಾಥ ದೇವಾಲಯಗಳು ನಮ್ಮ ಕರ್ನಾಟಕದ ಪುರಾತನ ದೇವಾಲಯಗಳಾಗಿವೆ. ಇಲ್ಲಿನ ಶಿಲ್ಪಕಲೆಗಳು ಹಂಪಿ ಮಾದರಿಯಲ್ಲಿದೆ ನಾವು ಎಲ್ಲೆಲ್ಲೋ ಹೋಗಿ ನೋಡುತ್ತಿವೆ ಆದರೆ ನಮ್ಮ ಭಾಗದ ಗ್ರಾಮಗಳ ಸಾರ್ವಜನಿಕರಿಗೆ ಇದರ ಅರಿವು ಮೂಡಿಬಂದಿಲ್ಲ ಕಾರಣ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಮೆದಕ್ ಸರಕಾರಿ ಪ್ರೌಡ ಶಾಲೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಕನ್ನಡ ಜಾಗೃತಿ ಮತ್ತು ಪರಿಸರ ರಕ್ಷಣೆ ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಪ್ರಾರ್ಥನಾ ಗೀತೆ ಕುಮಾರಿ ರಮಾಕೀರ್ತಿ 10ನೇ ತರಗತಿ ಮತ್ತು ಸಂಗಡಿಗರಿಂದ ನೆರವೇರಿತು.ಸ್ವಾಗತ ಭಾಷಣೆ ಕುಮಾರಿ ಸಾವಿತ್ರಮ್ಮ ಸಹ ಶಿಕ್ಷಕಿಯವರು ಮಾಡಿದರು.ವಂದನಾರ್ಪಣೆ ಅಥಿತಿ ಶಿಕ್ಷಕರಾದ ಮಾರುತಿ ಅವರು ಮಾಡಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ, ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ಚಿನ್ನಕಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹದೇವಮ್ಮ ಗಂಡ ಮಾಣಿಕಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಾಮಪ್ಪ, ಜಯ ಕರ್ನಾಟಕ ಜನಪರ ವೇದಿಕೆ ತಾಲೂಕ ಅಧ್ಯಕ್ಷರಾದ ಅಶೋಕ್ ಮಡಿವಾಳ, ಗ್ರಾಮ ಘಟಕ ಅಧ್ಯಕ್ಷರಾದ ಕೇಶವರೆಡ್ಡಿ ಮೇದಕ್, ಯಾಗುಂದಿ ಎಎಸ್ಐ ಸುಖದೇವ್, ಪೊಲೀಸ್ ಕಾಶೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




