ಚಿಟಗುಪ್ಪ:ಆ. 1 ರಂದು ಬೀದರ ಜಿಲ್ಲಾಧಿಕಾರಿ ಕಛೇರಿ ಮುಂದೆ ಒಳ ಮೀಸಲಾತಿ ಬೇಡಿಕೆಗಾಗಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಚಿಟಗುಪ್ಪ ತಾಲ್ಲೂಕು ಅಧ್ಯಕ್ಷ ಲಾಲಪ್ಪ ರಾಂಪುರೆ ಹೇಳಿದರು.
ಬುಧವಾರ ಮಾಧ್ಯಮ ಜೊತೆಗೆ ಮಾತನಾಡಿ ಅವರು,ಮಾದಿಗರು ತಮ್ಮ ಬೇಡಿಕೆಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತ ಬರುತಿದ್ದಾರೆ.ಆದರೆ ಇಲ್ಲಿಯವರೆಗೆ ಮಾದಿಗರ ಒಳ ಮೀಸಲಾತಿ ಸಿಕ್ಕಿಲ್ಲ.ಮಾದಿಗರ ಮತ ಪಡೆದುಕೊಂಡು ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನಡೆ ಖಂಡನೀಯವಾಗಿದೆ.
ಹೀಗಾಗಿ ಬರುವ ಆಗುಸ್ಟ್ 1ರಂದು ಹೆಚ್ಚಿನ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜು ಮುಸ್ತರಿ,ಬಸವರಾಜ ನಿರ್ಣಾ,ಸಿಮೋನ ಉಡಬಾಳ,ಪುಟ್ಟರಾಜ ಇಟಗಾ,ಶ್ರೀಮಂತ ಮೇತ್ರೆ,ರಾಜಕುಮಾರ ಒಳಕಿಂಡಿ ಇದ್ದರು.
ವರದಿ:ಸಜೀಶ ಲಂಬುನೋರ




