Ad imageAd image

ಕರ್ನಾಟಕ ಇತಿಹಾಸದಲ್ಲಿಯೇ ಅತಿ ದೊಡ್ಡ ವಂಚನೆ : 387 ಕೋಟಿ ರೂ. ಖದೀಮರ ಪಾಲು

Bharath Vaibhav
ಕರ್ನಾಟಕ ಇತಿಹಾಸದಲ್ಲಿಯೇ ಅತಿ ದೊಡ್ಡ ವಂಚನೆ : 387 ಕೋಟಿ ರೂ. ಖದೀಮರ ಪಾಲು
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಆಗಾಗ ಸೈಬರ್‌ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತದೆ. ಆದರೆ ಸದ್ಯ ಕರ್ನಾಟಕದಲ್ಲಿಯೇ ಅತಿದೊಡ್ಡ ಸೈಬರ್‌ ವಂಚನೆ ಪ್ರಕರಣ ನಡೆದಿದೆ.

ಇದೀಗ ಬೆಂಗಳೂರು ನಗರದಲ್ಲಿ ಪ್ರತಿಷ್ಠಿತ ಕ್ರಿಪ್ಸೋ ಕರೆನ್ಸಿ ಕಂಪನಿ ನೆಬಿಲೋ ಟೊಕ್ನಾಲಜೀಸ್ ಅನ್ನು ವಂಚಕರು ಹ್ಯಾಕ್‌ ಮಾಡಿದ್ದು, ಕೋಟಿ ಕೋಟಿ ಹಣ ಎಗರಿಸಿದ್ದಾರೆ.

ನೆಬಿಲೋ ಟೊಕ್ನಾಲಜೀಸ್ ಕಂಪೆನಿ ಬಗ್ಗೆ ಅನೇಕ ಜನರಿಗೆ ಗೊತ್ತಿದೆ. ಇದೊಂದು ಕ್ರಿಪ್ಸೋ ಕರೆನ್ಸಿ ಎಕ್ಸ್ ಚೇಂಜ್ ಮಾಡುವ ಕಂಪನಿಯಾಗಿದ್ದು, ಇದನ್ನ ಸೈಬರ್‌ ವಂಚಕರು ಹ್ಯಾಕ್‌ ಮಾಡಿದ್ದಾರೆ.

ಹ್ಯಾಕ್‌ ಮಾಡಿ ಬರೋಬ್ಬರಿ 387 ಕೋಟಿ ಹಣವನ್ನು ದೋಚಿದ್ದು, ಸದ್ಯ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯನ್ನ ಪ್ರಕರಣ ದಾಖಲಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆಯನ್ನ ಆರಂಭಿಸಿದ್ದು, ನೆಬಿಲೊ ಟೆಕ್ನಾಲಜೀಸ್ ಕಂಪನಿಯ ರಾಹುಲ್ ಎಂಬ ಸಿಬ್ಬಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರು ರಾಹುಲ್‌ ಲ್ಯಾಪ್‌ಟಾಪ್‌ ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳು ಲಭ್ಯವಾಗಿದೆ.

ರಾತ್ರಿ 2.37ಕ್ಕೆ ಹಣವನ್ನ ಕಂಪನಿ ವ್ಯಾಲೆಟ್ ನಿಂದ 1USDT ವರ್ಗಾವಣೆ ಮಾಡಲಾಗಿತ್ತು. ಬೆಳಗ್ಗೆ 9.40ಕ್ಕೆ ಮತ್ತೆ ವಂಚಕರು ತಮ್ಮ ಕೈಚಳಕ ತೋರಿಸಿದ್ದು, ಬರೋಬ್ಬರಿ 378 ಕೋಟಿ ಹಣವನ್ನ ಹ್ಯಾಕ್‌ ಮಾಡುವ ಮೂಲಕ ಎಗರಿಸಿದ್ದಾರೆ.

ಈ ಮಾಹಿತಿ ತಿಳಿದ ಕಂಪೆನಿ ಆಂತರಿಕವಾಗಿ ಇದರ ಬಗ್ಗೆ ತನಿಖೆ ಮಾಡಿತ್ತ. ಆ ಸಮಯದಲ್ಲಿರಾಹುಲ್‌ ಮೇಲೆ ಅನುಮಾನ ಬಂದು ಲ್ಯಾಪ್‌ಟಾಪ್‌ ಚೆಕ್‌ ಮಾಡಲಾಗಿದ್ದು, ವಂಚನೆ ಮಾಡಿರುವುದು ಪತ್ತೆಯಾಗಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!