Ad imageAd image

ಇಸ್ರೋ – ನಾಸಾ ಜಂಟಿ ಭೂ ವಿಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ 

Bharath Vaibhav
ಇಸ್ರೋ – ನಾಸಾ ಜಂಟಿ ಭೂ ವಿಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ 
WhatsApp Group Join Now
Telegram Group Join Now

ನವದೆಹಲಿ : ಇಂದು (ಜುಲೈ 30)ರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ NISAR ಅಂದರೆ ನಾಸಾ ಇಸ್ರೋ ಸಿಂಥೆಟಿಕ್ ಅಪರೆಂಟ್ ರಾಡಾರ್ ಉಡಾವಣೆ ಮಾಡಲಾಯಿತು. ಶಾಲಾ ಮಕ್ಕಳ ಸಮ್ಮುಖದಲ್ಲಿ ಉಡಾವಣೆ ಮಾಡಲಾದ NISAR ಹಲವು ವಿಧಗಳಲ್ಲಿ ಮುಖ್ಯವಾಗಿದೆ.

ಭೂಮಿಯು ಹವಾಮಾನ ಬದಲಾವಣೆಗೆ ಒಳಗಾಗುತ್ತಿರುವ ಸಮಯದಲ್ಲಿ, NISAR ಹಲವು ರೀತಿಯ ಮಾಹಿತಿಯನ್ನ ಒದಗಿಸುತ್ತದೆ.

NISAR ಪ್ರತಿ 12 ದಿನಗಳಿಗೊಮ್ಮೆ ಇಡೀ ಭೂಮಿಯನ್ನ ಅಳೆಯುತ್ತದೆ ಮತ್ತು ವಿಜ್ಞಾನಿಗಳಿಗೆ ಡೇಟಾವನ್ನು ಕಳುಹಿಸುತ್ತದೆ. ಈ ಕಡಿಮೆ ಕಕ್ಷೆಯ ಉಪಗ್ರಹವನ್ನ ಅಮೆರಿಕ ಮತ್ತು ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ದಶಕಗಳ ಪ್ರಯತ್ನಗಳ ನಂತರ, ಈ ಉಪಗ್ರಹವು ಈಗ ವಾಸ್ತವವಾಗಿದೆ. NISAR ಜಾಗತಿಕ ಘಟಕ ಮತ್ತು ವೈಜ್ಞಾನಿಕ ಶ್ರೇಷ್ಠತೆಯ ಜೀವಂತ ಸಂಕೇತ ಎಂದು ಕರೆಯಲಾಗುತ್ತಿದೆ. ಸೂರ್ಯ-ಸಿಂಕ್ರೊನಸ್ ಕಕ್ಷೆಯಿಂದ ಇಡೀ ಭೂಮಿಯನ್ನ ಅಧ್ಯಯನ ಮಾಡುವುದು ಈ ಉಪಗ್ರಹದ ಉದ್ದೇಶವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!