Ad imageAd image

ನಾನು ಭಾರತವನ್ನೇ ಬ್ಲಾಸ್ಟ್ ಮಾಡುತ್ತೇನೆ : ಬೆಂಗಳೂರಿನ ಗೋಡೆ ಬರಹ ಪತ್ತೆ

Bharath Vaibhav
ನಾನು ಭಾರತವನ್ನೇ ಬ್ಲಾಸ್ಟ್ ಮಾಡುತ್ತೇನೆ : ಬೆಂಗಳೂರಿನ ಗೋಡೆ ಬರಹ ಪತ್ತೆ
WhatsApp Group Join Now
Telegram Group Join Now

ಬೆಂಗಳೂರು : ರಾಮನಗರ, ಉಡುಪಿ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲೂ ದೇಶ ವಿರೋಧಿ ಬರಹ ಬರೆಯಲಾಗಿದೆ.

ನಾನು ಭಾರತವನ್ನೇ ಬ್ಲಾಸ್ಟ್ ಮಾಡುತ್ತೇನೆ ಎಂಬ ಆಘಾತಕಾರಿ ಗೋಡೆ ಬರಹ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ.

ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಅಪಾರ್ಟ್​ಮೆಂಟ್​​ವೊಂದರ ಗೋಡೆಯ ಮೇಲೆ ‘ನಾನು ಭಾರತವನ್ನು ಸ್ಫೋಟಿಸುತ್ತೇನೆ’ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ.

ದೇಶ ವಿರೋಧಿ ಬರಹ ಬರೆದಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು. ದೇಶ ವಿರೋಧಿ ಬರಹ ಬರೆದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಅಧಿಕಾರಿಗಳು ಅಪಾರ್ಟ್​ಮೆಂಟ್​​ನಲ್ಲಿರೋ ಎಲ್ಲಾ ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ಆರೋಪಿ ಯಾರು ಅನ್ನೋದು ಗೊತ್ತಾದರೆ, ತಕ್ಷಣವೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಆತನ ಹಿನ್ನೆಲೆಯನ್ನೂ ಪರಿಶೀಲಿಸಲಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!