Ad imageAd image

ಸಮಾಜದ ಒಳತಿಗಾಗಿ ದುಡಿದ ಹಾನಗಲ್ಲ ಶಿವಯೋಗಿ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

Bharath Vaibhav
ಸಮಾಜದ ಒಳತಿಗಾಗಿ ದುಡಿದ ಹಾನಗಲ್ಲ ಶಿವಯೋಗಿ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌
WhatsApp Group Join Now
Telegram Group Join Now

ಕಲಬುರಗಿ: ಹಾನಗಲ್ಲ ಶಿವಯೋಗಿಗಳು ಕನ್ನಡ ನಾಡು ನುಡಿ, ಕಂಡ ಶ್ರೇಷ್ಠ ಮಠಾಧಿಪತಿಗಳು. ಅಖಿಲ ಭಾರತ ವೀರಶೈವ ಮಹಾಸಭೆ, ಶಿವಯೋಗ ಮಂದಿರ ಇವುಗಳನ್ನು ಸ್ಥಾಪಿಸುವುದರ ಜೊತೆಗೆ ನಾಡಿನ ಎಲ್ಲ ಮೂಲೆಗಳಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜ್ವಲಂತ ಸಾಕ್ಷಿಯಾಗಿದ್ದಾರೆ ಎಂದು ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಹೇಳಿದರು.

ಸೇಡಂ ರಸ್ತೆ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಆಶ್ರಯದಲ್ಲಿ ಹಮ್ಮಿಕೊಂಡ ಹಾನಗಲ್ಲ ಗುರುಕುಮಾರ ಶಿವಯೋಗಿಗಳ ಪುರಾಣ ಕಾರ್ಯಕ್ರಮವನ್ನು ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್‌ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಒಳತಿಗಾಗಿ ಹಗಲಿರುಳು ದುಡಿದ ಕಾವಿ ಕುಲದ ಸಂತ, ಗಾನಗಲ್ಲ ಕುಮಾರ ಶಿವಯೋಗಿಗಳು ಶಿವಯೋಗ ಮಂದಿರ ಕಟ್ಟುವುದರ ಮೂಲಕ ಸ್ವಾಮಿಗಳನ್ನು ತಯಾರಿಸಿದರು. ಸಮಾಜ ಯಾವತ್ತು ಅಂಧಕಾರದಿಂದ ಶಿಕ್ಷಣದಿಂದ ಸಂಸ್ಕಾರದಿಂದ ಅನಾಥ ಆಗಬಾರದೆಂದು ಸಮಾಜಕ್ಕೆ ಹಗಲಿರುಳು ದುಡಿದವರು ಹಾನಗಲ್ಲ ಶ್ರೀಗಳು ಎಂದರು.

ದಿವ್ಯ ಸಾನಿಧ್ಯ ವಹಿಸಿದ ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿ ಮಾತನಾಡಿದರು. ನಗರ ಪೋಲಿಸ್ ಆಯುಕ್ತ ಶರಣಪ್ಪ ಎಸ್.ಡಿ. ಅತಿಥಿಗಳಾಗಿ ಆಗಮಿಸಿದರು.

ಪ್ರಾರಂಭದಲ್ಲಿ ಮಧು ಹಿಂದೊಡ್ಡಿ, ರೇಖಾ ಅಂಡಗಿ, ತಾರಾ ಪಾಟೀಲ, ಶ್ರೀದೇವಿ ತಂಬಾಕೆ, ಹಾನಗಲ್ಲ ಶ್ರೀಗಳ ಕುರಿತು ಪ್ರಾರ್ಥನಾ ಗೀತೆ ಹಾಡಿದರು. ಡಾ.ಗುರುರಾಜ ಮುಗಳಿ ವಂದನಾರ್ಪಣೆ ಮಾಡಿದರು.

ವಿದ್ಯಾನಗರದ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುರಾಣ ಕಾರ್ಯಕ್ರಮದ ಸಮಿತಿಯ ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಉದಯಕುಮಾರ ಪಡಶೆಟ್ಟಿ, ನಾಗರಾಜ ಹೆಬ್ಬಾಳ, ಶಾಂತಯ್ಯ ಬೀದಿಮನಿ ಹಾಗೂ ವೆಲ್‌ಫೇರ್ ಸೊಸೈಟಿಯ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ಹಾಗೂ ಮಲ್ಲಿಕಾರ್ಜುನ ತರುಣ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!