ನಿಪ್ಪಾಣಿ : ಈ ಸಂದರ್ಭದಲ್ಲಿ ಮುಖಂಡರೂ ಮಾತನಾಡಿ ನಮ್ಮ ಸಮುದಾಯ ಅನಕ್ಷರಸ್ಥ. 2014 ರಿಂದ ಕರ್ನಾಟಕದಾದ್ಯಂತ ಕಂದಾಯ ಇಲಾಖೆಯಿಂದ ಮತ್ತು ಇಲ್ಲಿಯವರೆಗೆ ತಮ್ಮ ಇಲಾಖೆಯಿಂದ ಎಸ್.ಟಿ ಜಾತಿಯ (ಗೋಸಾವಿ )ಡೋಂಗ್ರಿ ಅಲೆಮಾರಿ ಬುಡಕಟ್ಟು ಜನರು ಎಂದು ಜಾತಿ ನೋಂದಣಿ ಪ್ರಮಾಣಪತ್ರಗಳನ್ನು ನಮಗೆ ನೀಡಲಾಗಿದೆ ಎಂದು ನಿಪ್ಪಾಣಿ ನಗರದಲ್ಲಿ ಗೋಸಾವಿ ಜನಾಂಗ ಒತ್ತಡ.
ಸಮುದಾಯದ ಹೆಚ್ಚಿನ ಜನರು ಅನಕ್ಷರಸ್ಥವಾಗಿರುವುದರಿಂದ, ಕೆಲವು ಜನರು ಇನ್ನೂ ಜಾತಿ ಪ್ರಮಾಣಪತ್ರಗಳನ್ನು ಪಡೆದಿಲ್ಲ,ಜಾತಿ ಪ್ರಮಾಣಪತ್ರಗಳನ್ನು ಕೋರಿದಾಗ, ಸಮುದಾಯದ ಮುಖಂಡರು ಮತ್ತು ಸ್ಥಳೀಯ ಜನರು ವಿಚಾರಣೆ ನಡೆಸಿದರು.
ಅಧಿಕಾರಿಗಳು ಹಿಂದಿನ ಪುರಾವೆಗಳನ್ನು ನೋಡಿದ ನಂತರ ಒಂದೂವರೆ ಎರಡು ತಿಂಗಳ ಹಿಂದೆ, 14 ಶಾಲಾ ವಿದ್ಯಾರ್ಥಿಗಳು ಜಾತಿ ಪ್ರಮಾಣಪತ್ರಗಳಿಗಾಗಿ ಅರ್ಜಿ ಸಲ್ಲಿಸಿದರು ಇನ್ನು ಕೆಲವರ ಕಾಗದ ಪತ್ರಗಳು ಸ್ಪಷ್ಟ ವಾಗಿಲ್ಲ ಕೆಲ ಕಾನೂನು ಅಡೆ ತಡೆಗಳು ಇವೆ ಅದರಲ್ಲಿ 13 ಜನರಿಗೆ ನೀಡಿದ್ದೇನೆ 1 ರಿಗೆ ಇನ್ನು ಚೌಕಾಸಿ ಮಾಡಿ ಕೊಡುತ್ತೇನೆಂದು ಉಪತಹಸೀಲ್ದಾರ್ ತಿಳಿಸಿದ್ದಾರೆ
ಆದರೆ (ಗೋಸಾವಿ )ಡೋಂಗ್ರಿ ಅಲೆಮಾರಿ ಬುಡಕಟ್ಟು ಜನರು ಎಂದು ಗೋಸಾವಿ ಜನಾಂಗ ಜಾತಿ ಪ್ರಮಾಣಪತ್ರಗಳನ್ನು ನೀಡಿಲ್ಲ ಎಂದು ಕೆಲ ಜನ ಆರೋಪಿಸಿದ್ದಾರೆ.
ಹಾಗೂ ಈ ಜಾತಿ ಪ್ರಮಾಣಪತ್ರ ವಿಚಾರಣೆಯನ್ನು ಮಾಡಿ ನಿಪ್ಪಾಣಿಯಿಂದ ಉಪ ತಹಶೀಲ್ದಾರ್ ಅರುಣ್ ಶ್ರೀಖಂಡೆ ಅವರನ್ನು ವರ್ಗಾವಣೆ ಮಾಡಬೇಕೆಂದು ನಿಪ್ಪಾಣಿ ತಹಶೀಲ್ದಾರ್ ಮುಜಫರ್ ಬಳಿಗಾರ ರವರಿಗೆ ಮನವಿಯನ್ನು ನೀಡಿದರು.
ನಂತರ ತಹಶೀಲ್ದಾರ ಮಾತನಾಡಿ ನಾವೂ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಹಾಗೂ ಇಲ್ಲಿ ಏಜೆಂಟರಿಗೆ ಆವಕಾಶ ನೀಡುವುದಿಲ್ಲ ನೆರವಾಗಿ ತಮಗೆ ಸಂಪರ್ಕಿಸಿ ಗೊಂದಲಗಳಿಗೆ ಪರಿಹಾರ ಕಂಡು ಕೊಳ್ಳುತ್ತೇವೆಂದು ಆಶ್ವಾಸನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗೋಸಾವಿ ಸಮಾಜದ ಮುಖಂಡ ಗಣು ಗೋಸಾವಿ,ನಗರ ಸೇವಕ ವಿಲಾಸ ಗಾಡಿವಡ್ಡರ , ಹಿರಿಯ ಮುಖಂಡ ಅಚುತರಾವ ಮಾನೆ,ಅಜಯ ಮಾನೆ,ಅವಿನಾಶ ಮಾನೆ,ಯುವ ಮುಖಂಡ ಅರೇಶ ಸನದಿ, ಮಾಜಿ ನಗರ ಸೇವಕ ಜಾಕಿರ್ ಖಾದರಿ, ಶಕುಂತಲಾ ತೇಲಿ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ, ಸಂಬಾಜಿ ಗೋಸಾವಿ, ಸುಶೀಲ ಕಾಂಬ್ಳೆ , ಮಂಗಲ ಘೋರ್ಪಡೆ, ಸಮಾಜ ಸೇವಕ ಸುಧಾಕರ ಮಾನೆ ಸೇರಿದಂತೆ ಸಮಾಜದ ಜನರು ಉಪಸ್ಥಿತಿ ಇದ್ದರು.
ವರದಿ : ರಾಜು ಮುಂಡೆ




