ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನಿಗೂಢ ಸಾವಿನ ಕೇಸ್ ಗೆ ಸಂಬಂಧಿಸಿದಂತೆ SIT ಸತತ ಮೂರನೇ ದಿನವೂ ಉತ್ಖನನ ಪ್ರಕ್ರಿಯೆ ನಡೆಯಲಿದೆ.ಈಗಾಗಲೇ 13 ಜಾಗಗಳನ್ನು ಮಾರ್ಕ್ ಮಾಡಲಾಗಿದ್ದು, 5 ಕಡೆ ಗುಂಡಿಗಳನ್ನು ಅಗೆದು ತನಿಖೆ ನಡೆದಿದೆ.
ಬಾಕಿಯಿರೋ 8 ಗುಂಡಿಗಳನ್ನು ಇವತ್ತು ಮಾನವ ಶ್ರಮದ ಮೂಲಕವೇ ಗುಂಡಿಗಳನ್ನು ಅಗೆದು ಉತ್ಖನನ ನಡೆಯಲಿದೆ. ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಸ್ಥಳದಲ್ಲೇ ಮೊಕ್ಕಾo ಹೂಡಿದ್ದಾರೆ.
ನೇತ್ರಾವತಿ ತಟದ 6ನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ಶುರುವಾಗಲಿದೆ. ಈಗ ನಡೆದಿರೋ 5ಪಾಯಿಂಟ್ ಗಳಲ್ಲಿ ಇದುವರೆಗೆ ಯಾವುದೇ ಅಸ್ಥಿಪಂಜರ ಅಥವಾ ಶವಗಳು ಪತ್ತೆಯಾಗಿಲ್ಲ,
ಬುಧವಾರ ರಾತ್ರಿ ಅನಾಮಿಕ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಸ್ಫೋಟಕ ವಿಚಾರಗಳನ್ನು ಆತ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ಅಲ್ಲದೆ, ಅಸ್ತಿಪಂಜರ ರಹಸ್ಯ ಭೇದಿಸೋ ಕಾರ್ಯಾಚರಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಥಳಕು ಹಾಕಿಕೊಂಡಿದೆ.
ಅನಾಮಿಕ ದೂರುದಾರ ವಿಚಾರಣೆಯಲ್ಲಿ ಅಧಿಕಾರಿಯ ಹೆಸರು ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ಪೊಲೀಸ್ ಔಟ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಅಧಿಕಾರಿ ಮಾತ್ರವಲ್ಲದೇ SIT ವಿಚಾರಣೆ ವೇಳೆ ಅನಾಮಿಕ ಹಲವರ ಹೆಸರು ಉಲ್ಲೇಖಿಸಿದ್ದಾನೆ. ಹೀಗಾಗಿ ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ಮಾಡುವ ಸಾಧ್ಯತೆ ಇದೆ.
ನೇತ್ರಾವತಿ ನದಿ ಸ್ನಾನಘಟ್ಟ ಪಕ್ಕದ ಕಾಡಿನಲ್ಲಿ ಮಾರ್ಕ್ ಮಾಡಿದ ಮೇಜರ್ ಸ್ಪಾಟ್ ಗಳಲ್ಲಿ ಇವತ್ತು 20 ಕಾರ್ಮಿಕರ ತಂಡ ಗುಂಡಿ ಅಗೆಯಲಿದೆ. ಸ್ಥಳೀಯರ ಸಹಾಯದಿಂದ ಹಲವು ಕಡೆ ಮಣ್ಣು ಅಗೆದಿದ್ದಾರೆ.
ಎಸ್‌ಐಟಿ ಜೊತೆ ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ ನೆಲ ಅಗೆಯಲಗುತ್ತೆ. ಇವತ್ತಿನ ಗುಂಡಿ ಅಗೆಯೋ ಪ್ರಕ್ರಿಯೆ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ.
ಅನಾಮಿಕ ಗುರುತಿಸಿರೋ ಅತಿ ಹೆಚ್ಚು ಪಾಯಿಂಟ್ ಗಳು ಇವತ್ತು ಅಗೆಯೋ ಜಾಗದಲ್ಲೇ ಹೆಚ್ಚಾಗಿದೆ. ಹೀಗಾಗಿ ಕಾರ್ಯಚರಣೆಗೆ ಮತ್ತಷ್ಟು ವೇಗ ಸಿಗಲಿದೆ. ಬಾಕಿಯಿರೋ 8 ಗುಂಡಿಗಳನ್ನು ಇವತ್ತೇ ಅಗೆಯೋ ಸಾಧ್ಯತೆ ದಟ್ಟವಾಗಿದೆ.
ನಿಗೂಢ ದೂರುದಾರನ ಹೇಳಿಕೆಯ ಮೇರೆಗೆ ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ಹೂತಿಟ್ಟ ಹೆಣಗಳಿಗಾಗಿ ಬೇಟೆ ಶುರುವಾಗಿದ್ದು ಇಂದು ವಿಶೇಷ ತನಿಖಾ ತಂಡದ ಅಧಿಕಾರಿಗಳೀಗೆ ಏನಾದರೂ ಸುಳಿವು ಸಿಗುತ್ತಾ ಎಂಬ ಕುತೂಹಲ ಮನೆಮಾಡಿದೆ.




