ಚಡಚಣ : ಚಡಚಣ ತಾಲೂಕಿನಲ್ಲಿ ಸುಮಾರು ಕೆರೆಗಳಿವೆ ಇವತ್ತಿಗೂ ಕೆರೆ ತುಂಬುವಲ್ಲಿ ಸರಕಾರ ಹಿಂದೇಟು ಹಾಕತಾ ಇದೆ ಯಾಕೆ ? ಎಂದು ಇಲ್ಲಿನ ರೈತರ ಪ್ರಶ್ನೆಯಾಗಿ ಉಳಿದುಬಿಟ್ಟಿದೆ ಕೆರೆಯ ಸುತ್ತಮುತ್ತಲಿನ ರೈತರಿಗೆ ನೀರಿಲ್ಲದ ಕಾರಣ ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ ಮೊದಲೇ ಮಳೆರಾಯ ರೈತರಿಗೆ ಕೈಕೊಟ್ಟಿದ್ದಾನೆ ಮಳೆ ಸರಿಯಾಗಿ ಬರತಾಯಿಲ್ಲ ಹೀಗಾಗಿ ದನ ಕರುಗಳಿಗೆ ನೀರವಿಲ್ಲದಂತಾಗಿದೆ ಕೆರೆಯ ಸುತ್ತಮುತ್ತಲಿನ ರೈತರು ಮಳೆರಾಯನನ್ನು ನಂಬಿ ಬಿತ್ತನೆಮಾಡಿದ್ದಾರೆ.
ಬಿತ್ತನೆ ಮಾಡಿದ ಬೆಳ ವಣಗತಾಯಿದೆ ರೈತರು ಯಾರು ಹತ್ರಾ ಹೋಗಿ ಕೈಮುಗಿದು ನಿಲ್ಲಬೇಕು ಅದಕ್ಕೆ ರೈತರು ಮಾಧ್ಯಮದವರನ್ನು ಕರೆ ಮಾಡಿ ಕರೆಸಿ ಅವರ ನೋವುಗಳನ್ನು ಮಾಧ್ಯಮದವರ ಮುಂದೆ ಬಿಚ್ಚಿಟ್ಟರು ಮಳೆಗಾಲದಲ್ಲಿ ಕೆರೆ ತುಂಬವಲ್ಲಿ ಸರ್ಕಾರ ವಿಪಲಗೊಂಡಿದೆ ಇತರ ಆದರೆ ಬೇಸಿಗೆ ಕಾಲದಲ್ಲಿ ನೀರು ಕುಡಿಯಲಿಕ್ಕೆ ಪರದಾಡುಬೇಕಾಗುತ್ತೆ ಮತ್ತು ದನ ಕರೆಗಳು ನೀರಿಲ್ಲದ ಕಾರಣ ಸತ್ತು ಹೋಗುತ್ತವೆ,ಕೆರೆ ತುಂಬುವ ಯೋಜನೆಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಅಧಿಕಾರಿಗಳ ಜೊತೆ ಫೋನ್ ಮಾಡಿ ಸರ್ ಕೆರೆ ಇನ್ನೂ ಯಾಕೆ ತುಂಬಿಲ್ಲ ಏನು ಸಮಸ್ಯೆ ಇದೆ ಎಂದು ಪ್ರಶ್ನೆ ಮಾಡಿದರೆ ಇನ್ನು ಟೆಂಡರ್ ಕರೆದಿಲ್ಲ ಮತ್ತು ಹಲವು ಸಮಸ್ಯೆಗಳಿವೆ ಅದಕ್ಕೆ ಕೆರೆಗಳಿಗೆ ನೀರು ಬಿಡಕ್ಕೆ ಆಗ್ತಾ ಇಲ್ಲ ಮುಂದೆ ನೋಡೋಣ ಎಂದು ಫೋನ್ ಕಟ್ಟ ಮಾಡುತ್ತಾರೆ ಹೀಗಾದರೆ ರೈತರು ಯಾರ ಹತ್ತಿರ ತಮ್ಮ ನೋವನ್ನು ಹೇಳಬೇಕು ಇತ್ತ ಕಡೆ ಸರ್ಕಾರನೂ ಕಣ್ಮುಚ್ಚಿ ಕೂಳಿತಿದೆ ಅಧಿಕಾರಿಗಳ ಕೆರೆ ತುಂಬುವಲ್ಲಿ ಲಕ್ಷ್ಯ ವಹಿಸುತ್ತಿಲ್ಲಾ ಅದಕ್ಕೆ ಮಾಧ್ಯಮದವರ ಮುಖಾಂತರ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದಾರೆ
ಈ ಸಂದರ್ಭದಲ್ಲಿ ಪ್ರಗತಿಪರ ರೈತರ ಅರ್ಜುನ್ ಕ್ಷತ್ರಿ ಮಾತನಾಡಿ ತಮ್ಮ ನೋವನ್ನು ಹಂಚಿಕೊಂಡರು ಮತ್ತು ಮಹೇಶ ಶಿಂಧೆ, ಸಂಜಯ ಕ್ಷತ್ರಿ, ವರದಿಗಾರರಾದ ಲಕ್ಷ್ಮಣ ಶಿಂಧೆ ಇನ್ನೂ ಅನೇಕ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ : ಉಮಾಶಂಕರ ಕ್ಷತ್ರಿ




