Ad imageAd image

೧೦ರಂದು ಸಿದ್ಧಾರೂಢ ಮಠದಲ್ಲಿ ಜಲರಥೋತ್ಸವ

Bharath Vaibhav
೧೦ರಂದು ಸಿದ್ಧಾರೂಢ ಮಠದಲ್ಲಿ ಜಲರಥೋತ್ಸವ
WhatsApp Group Join Now
Telegram Group Join Now

ಹುಬ್ಬಳ್ಳಿ : ಶಿವಾವತಾರಿಯ ವಾಸಸ್ಥಾನವೆಂದೇ ಕರೆಸಿಕೊಳ್ಳುವ ಶ್ರೀ ಸಿದ್ಧಾರೂಢ ಮಠದ ಜಲರಥೊತ್ಸವ (ತೆಪ್ಪದ ತೇರು) ಆ. ೧೦ರಂದು ಸಂಜೆ ೫.೩೦ಕ್ಕೆ ಜರುಗಲಿದೆ ಎಂದು ಟ್ರಸ್ಟ್ ಕಮಿಟಿ ಚೇರಮನ್ ಚನ್ನವೀರ ಮುಂಗುರವಾಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಗುರು ಶ್ರೀ ಸಿದ್ಧಾರೂಢರ ೯೬ನೇ ಪುಣ್ಯಾರಾಧನೆ ಕಾರ್ಯಕ್ರಮವು ಆ. ೪ರಿಂದ ಆರಂಭಗೊಂಡು ಆ. ೧೦ರಂದು ಜಲ ರಥೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ ಎಂದರು.

ನಿತ್ಯ ಶ್ರೀಮಠದ ಕೈಲಾಸ ಮಂಟಪದಲ್ಲಿ ಬೆಳಗ್ಗೆ ೭.೪೫ಕ್ಕೆ ಪುರಾಣ ಪಠಣ, ೯.೩೦ಕ್ಕೆ ಪ್ರವಚನ, ಸಂಜೆ ೫ ಗಂಟೆಗೆ ಕೀರ್ತನೆ ಹಾಗೂ ರಾತ್ರಿ ಮಹಾಪೂಜೆ ಜರುಗಲಿದೆ ಎಂದು ತಿಳಿಸಿದರು.

ಸಿದ್ಧಾರೂಢರ ಸ್ವಾಮೀಜಿ ಜಲರಥೋತ್ಸವವು ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ ರಾಜ್ಯ ಗಳಿಂದ ಭಕ್ತರು ಆಗಮಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಬಸವರಾಜ ಕಲ್ಯಾಣಶೆಟ್ಟರ, ಬಾಳು ಮಗಜಿಕೊಂಡಿ, ವಿನಾಯಕ ಘೋಡ್ಕೆ, ಸರ್ವಮಂಗಳಾ ಪಾಠಕ,ಮಂಜುನಾಥ ಮುನವಳ್ಳಿ ಮ್ಯಾನೇಜರ್ ಈರಣ್ಣ ತುಪ್ಪದ ಇತರರು ಪಾಲ್ಗೊಂಡಿದ್ದರು.

ವರದಿ : ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!