ಚಾಮರಾಜನಗರ : ಬೆಂಗಳೂರು ಕೃಷಿ ವಿದ್ಯಾನಿಲಯ ಹಾಗೂ ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ವತಿಯಿಂದ ಮುಕ್ಕಡಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾಗಾರವನ್ನು ನೆಡೆಸಲಾಯಿತು.
ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಮಣ್ಣು ಪರೀಕ್ಷೆ ಮಾದರಿಯನ್ನು ಪ್ರತ್ಯಕ್ಷವಾಗಿ ರೈತರ ಮುಂದೆ ಮಾಡಿತೋರಿಸಿದರು.
ಮಣ್ಣಿನ ಪರೀಕ್ಷೆಯ ಮಹತ್ವವನ್ನು ತಿಳಿಸಲು ವಿದ್ಯಾರ್ಥಿಗಳು ಒಂದು ಕಿರು ನಾಟಕವನ್ನು ಪ್ರಸ್ತುತ ಪಡಿಸಿದರು.
ಕೃಷಿ ವಿದ್ಯಾರ್ಥಿಗಳಾದ ಅದೀಶ್, ಕುಮಾರಿ ರಾಧಿಕ, ಚಂದನ್ ರವರು ಇಂದಿನ ವಿಷಯದ ಬಗ್ಗೆ ಮಾದರಿಗಳು, ಚಾರ್ಟ್ ಗಳು ಹಾಗೂ ಪವರ್ ಪಾಯಿಂಟ್ ಗಳ ಮೂಲಕ ತಮ್ಮ ವಿಚಾರವನ್ನು ರೈತರ ಮುಂದೆ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ರೈತರ ಪ್ರಶ್ನೆಗಳಿಗೆ ಉತ್ತರಿಸಿದಲಾದೆ ಮಣ್ಣಿನ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪಿ. ಪ್ರಕಾಶ್, ಡಾ. ಪ್ರದೀಪ್, ಡಾ.ರವೀಂದ್ರ ಯಳಿಗಾರ್ ಹಾಗೂ ವಿದ್ಯಾರ್ಥಿಗಳು, ರೈತರ ಉಪಸ್ಥಿತರಿದ್ದರು.
ವರದಿ : ಸ್ವಾಮಿ ಬಳೇಪೇಟೆ




