Ad imageAd image

ಶಿಕ್ಷಕ ಬಸವರಾಜ ಕುಲಕರ್ಣಿ ಸೇವಾ ನಿವೃತ್ತಿಯ ಬೀಳ್ಕೋಡುಗೆ

Bharath Vaibhav
ಶಿಕ್ಷಕ ಬಸವರಾಜ ಕುಲಕರ್ಣಿ ಸೇವಾ ನಿವೃತ್ತಿಯ ಬೀಳ್ಕೋಡುಗೆ
WhatsApp Group Join Now
Telegram Group Join Now

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಸುತಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 30 ವರ್ಷಗಳ ಕಾಲ ಶಿಕ್ಷಕರಾಗಿ ಗ್ರಾಮಸ್ಥರೊಂದಿಗೆ, ಸರಳ ಸಜ್ಜನಿಕೆಯ ಸ್ನೇಹಜೀವಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಈಗ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದ್ದ ಶ್ರೀ ಬಸವರಾಜ ಶೀ ಕುಲಕರ್ಣಿ ಶಿಕ್ಷಕರು ಇಂದು ಸೇವಾ ನಿವೃತ್ತಿಯನ್ನು ಹೊಂದಿದರು, ಇವರು ತಮ್ಮ ಶಿಕ್ಷಣ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಇದೀಗ ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದು , ಇವರ ಕೈಯಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಸರ್ಕಾರದ ಉನ್ನತ ಮಟ್ಟದ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು.

ಇವರ ಸೇವಾ ನಿವೃತ್ತಿ ಜೀವನ, ಮುಂದಿನ ದಿನಗಳಲ್ಲಿ ,ಸುಖ, ಶಾಂತಿ, ಸಮೃದ್ಧಿಯಿಂದ ತುಂಬಿರಲಿ ಎಂದು ಸಮಸ್ತ ಸುತಗಟ್ಟಿ ಗ್ರಾಮದ ಗ್ರಾಮಸ್ಥರು ಹಾರೈಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ

ಶ್ರೀ P. C ಪರೀತ K.D.ಕೋಲಕಾರ ಸರ್(ಹಿಟ್ಟಿಣಗಿ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು ) S.B.ಮಂಬನೂರ ಸರ್ ಹಾಗೂ ನಿವೃತ್ತ ಪ್ರಧಾನ ಗುರುಗಳಾದ S.B. ಅಂಗಡಿ ಹಾಗೂ B.N. ಅಬ್ಬಾಯಿ ಅವರು ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಮಹೇಶ್ ಪಾಟೀಲ್ ಇವರ ನೇತೃತ್ವದಲ್ಲಿ ಸುರೇಶ್ ದೊಡವಾಡ ಹಾಗೂ ಮಂಜುನಾಥ್ ಅಬ್ಬಾಯಿ, ಮುತ್ತು ನಾವಲಗಟ್ಟಿ,ಅನ್ವರ ಬಾವಾಖಾನ ಹಾಗೂ SDMC ಸರ್ವ ಸದಸ್ಯರು ಬಾಗಿ ಇದ್ದರು.
ಕಾರ್ಯಕ್ರಮದ ಕಿರು ಪರಿಚಯವನ್ನು ಶಾಲೆಯ ಗುರುಮಾತೆ M.B.ಸುಳೇಬಾವಿ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ವಂದನಾರ್ಪಣೆಯನ್ನು M.i. ಭರಮನ್ನವರ ಗುರುಮಾತೆ ನೆರವೇರಿಸಿದರು.

ಬಸವರಾಜ ಕುಲಕರ್ಣಿ ಶಿಕ್ಷಕರ ನಿವೃತ್ತಿ ಕುರಿತು ಶಾಲೆಯ ವಿದ್ಯಾರ್ಥಿನಿಯರು ಪೃಥ್ವಿ ಮೊರಬದ, ಸೃಷ್ಟಿ ಉಗ್ರಾಣ ಹಾಗೂ ಇನ್ನೂ ಅನೇಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಗ್ರಾಮದ ಅನೇಕ ಸಂಘ ಸಂಸ್ಥೆಗಳ ವತಿಯಿಂದ ಶಿಕ್ಷಕರನ್ನು ಸನ್ಮಾನಿಸುವುದರ ಮುಖಾಂತರ ಬೀಳ್ಕೊಡಲಾಯಿತು, ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಯುವಕರು .

ವರದಿ : ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!