ಬುಲಾವಾಯೋ (ಜಿಂಬಾಬ್ವೆ) ನ್ಯೂಜಿಲೆಂಡ್ ಕ್ರಿಕೆಟ್ ತಂಡ ಜಿಂಬಾಬ್ವೆ ಪ್ರವಾಸ ಪ್ರವಾಸ ಕೈಗೊಂಡಿದ್ದು, ಆತಿಥೇಯ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು 9 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ದ್ವಿತೀಯ ಸರದಿಯಲ್ಲಿ ಗೆಲ್ಲಲು 8 ರನ್ ಗಳನ್ನು ಮಾತ್ರ ಗಳಿಸಬೇಕಿದ್ದ ನ್ಯೂಜಿಲೆಂಡ್ 1 ವಿಕೆಟ್ ಕಳೆದುಕೊಂಡು ತನ್ನ ಗೆಲುವಿನ ಗುರಿ ಸಾಧಿಸಿತು. ನ್ಯೂಜಿಲೆಂಡ್ ತನ್ನ ಮೊದಲ ಸರದಿಯಲ್ಲಿ 307 ರನ್ ಗಳಿಸಿತ್ತು. ಜಿಂಬಾಬ್ವೆ ತನ್ನ ಮೊದಲ ಸರದಿಯಲ್ಲಿ 149 ಹಾಗೂ ದ್ವಿತೀಯ ಸರದಿಯಲ್ಲಿ 165 ರನ್ ಗಳಿಸಿತ್ತು.




