Ad imageAd image

ಜೈಸ್ವಾಲ್ ಶತಕ, ಆಕಾಶ್ ದೀಪ್ ಅರ್ಧ ಶತಕ

Bharath Vaibhav
ಜೈಸ್ವಾಲ್ ಶತಕ, ಆಕಾಶ್ ದೀಪ್ ಅರ್ಧ ಶತಕ
WhatsApp Group Join Now
Telegram Group Join Now

—————————————————-ಭಾರತ ತಂಡಕ್ಕೆ 287 ರನ್ ಗಳ ಮುನ್ನಡೆ

ಲಂಡನ್: ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಶತಕ (118) ಹಾಗೂ ಆಕಾಶ್ ದೀಪ್ ಅವರ ಚೊಚ್ಚಲ ಅರ್ಧ ಶತಕ ( 66) ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ಐದನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಒಟ್ಟಾರೆ 287 ರನ್ ಮುನ್ನಡೆ ಪಡೆದಿದೆ.

ಕೆನಿಂಗ್ಟನ್ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದ ಮೂರನೇ ದಿನ ಚಹಾ ವಿರಾಮದ ನಂತರದ ಆಟದಲ್ಲಿ ಭಾರತ ತನ್ನ ದ್ವಿತೀಯ ಸರದಿಯಲ್ಲಿ 6 ವಿಕೆಟ್ ಗೆ 310 ರನ್ ಗಳಿಸಿದ್ದು, 287 ರನ್ ಗಳ ಮುನ್ನಡೆ ಪಡೆದು ಐದನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು 2-2 ರಿಂದ ಸಮ ಮಾಡಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಯತ್ನ ನಡೆಸಿದೆ.

—————————ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ (118)

ಎಡಗೈ ಆರಂಭ ಆಟಗಾರ ಜೈಸ್ವಾಲ್ 164 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ ನೆರವಿನಿಂದ 118 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಎರಡನೇ ದಿನದಾಂತ್ಯಕ್ಕೆ ರಾತ್ರಿ ಕಾವಲುಗಾರನಾಗಿ ಆಡಲು ಬಂದ ಆಕಾಶ್ ದೀಪ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ಅರ್ಧ ಶತಕ ಸಿಡಿಸಿದರು. ಅವರು 94 ಎಸೆತಗಳನ್ನು ಎದುರಿಸಿ 12 ಬೌಂಡರಿಗಳನ್ನು ಸಿಡಿಸಿ ಶುಭಮಾನ್ ಗಿಲ್ ಪಾಳಯದಲ್ಲಿ ಹೊಸ ಹುರುಪು ಮೂಡಿಸಿದರು.

ಆದರೆ ನಾಯಕ ಶುಭಮಾನ್ ಗಿಲ್ (11) ಸಾಯಿ ಸುದರ್ಶನ್ (11) ಹಾಗೂ ಕೆ.ಎಲ್. ರಾಹುಲ್ (7) ನಿರಾಶೆ ಮೂಡಿಸಿದರು. ಕರುಣ್ ನಯ್ಯರ  17 ದೊಡ್ಡ ಮೊತ್ತ ಸಾಗುವ ಲಕ್ಷಣ ತೋರಿದ್ದರಾದರೂ ಅವರೇ ಮೊತ್ತದಲ್ಲಿ ವಿಕೆಟ್ ಚಲ್ಲಿದರು. ರವೀಂದ್ರ ಜಡೆಜಾ (33) ಹಾಗೂ ದ್ರುವ್ ಜುರೆಲ್ (32) ಕ್ರೀಸ್ ಬಳಿ ಇದ್ದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!