ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಹೈಟೆಕ್ ಬಸ್ ನಿಲ್ದಾಣ
ಕಟ್ಟಡ ನಿರ್ಮಿಸಿ 1 ವರ್ಷ ಗತಿಸಿದರೂ ಇನ್ನೂ ಉದ್ಘಾಟನೆ ಉದ್ಘಾಟನೆ ಭಾಗ್ಯಕಂಡಿಲ್ಲ. ಸದರಿ
ಬಸ್ ನಿಲ್ದಾಣದಲ್ಲಿ ರಾತ್ರಿಯಾಗುತ್ತಿದ್ದಂತೆ ಕುಡಕರ ತಾಣವಾಗುತ್ತಿದೆ. ಅಷ್ಟೇ ಅಲ್ಲ ಭೀಕ್ಷುಕರು, ಅಲೆಮಾರಿಗಗಳ ವಾಸಸ್ಥಾನವಾಗಿದ್ದು ಗಲೀಚು ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ.

ಬೆಳಿಗ್ಗೆಯಿಂದ ಬಸ್ ಇರಬೇಕಾದ ಸ್ಥಳದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿಗಳು ಇತ್ತ ಗಮನಹರಿಸಿ ಆದಷ್ಟು ಬೇಗ ಬಸ್ ನಿಲ್ದಾಣ ಉದ್ಘಾಟನೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಶೀಘ್ರವೇ ಬಸ್ ನಿಲ್ದಾಣ ಉದ್ಘಾಟನೆ ಆಗದಿದ್ದರೆ ಹೋರಾಟ ಮಾಡುವುದಾಗಿ ಸಮಾಜ ಸೇವಕ ಚಂದ್ರಕಾಂತ್ ಹುಕ್ಕೇರಿ ಎಚ್ಚರಿಕೆ ನೀಡಿದ್ದಾರೆ.
ವರದಿ: ಮಹಾವೀರ ಚಿಂಚಣೆ




