Ad imageAd image

ಕ್ರೈಸ್ತ ಸಂಘಟನೆಗಳ ಮೌನ ಪ್ರತಿಭಟನೆ!

Bharath Vaibhav
ಕ್ರೈಸ್ತ ಸಂಘಟನೆಗಳ ಮೌನ ಪ್ರತಿಭಟನೆ!
WhatsApp Group Join Now
Telegram Group Join Now

ಸಿಂಧನೂರು : ಜುಲೈ 3, ಛತ್ತಿಸ ಗಡದಲ್ಲಿ ಕಾನೂನು ಬಹಿರವಾಗಿ ಬಂಧಿಸಲಾದ ಕ್ಯಾಥೋಲಿಕ್ ಕನ್ಯಾ ಸ್ತ್ರೀಯರನ್ನು ಹಾಗೂ ಮುಗ್ಧ ಜನರ ಮೇಲೆ ದೌರ್ಜನ್ವನ್ನು ಖಂಡಿಸಿ ಬಳ್ಳಾರಿ ಧರ್ಮ ಕ್ಷೇತ್ರದ ಸಿಂಧನೂರು ವಲಯದ ಪವಿತ್ರ ಕುಟುಂಬದ ದೇವಾಲಯ ದಿಂದ ಮೌನ ಪಾದಯಾತ್ರೆಯ ಮೂಲಕ ಎಲ್ಲಾ ಕ್ರೈಸ್ತ ಭಕ್ತರು ಮತ್ತು ಗುರುಗಳು ಕನ್ಯಾ ಸ್ತ್ರೀಯರು ಸೇರಿಕೊಂಡು ಪವಿತ್ರ ಕುಟುಂಬ ದೇವಾಲಯದ ಮುಖ್ಯ ಗುರುಗಳು ವಂ. ಜ್ಞಾನಪ್ರಕಾಶಂ ಇವರ ನೇತೃತ್ವದಲ್ಲಿ ನಗರದ ಮಹಾತ್ಮ ಗಾಂಧಿ ಸರ್ಕಲ್ ನಲ್ಲಿ ಮೌನ ಪ್ರತಿಭಟನೆ ನಡೆಸಿ ಅಲ್ಪಸಂಖ್ಯಾತರ ಕ್ರೈಸ್ತರಾದ ನಾವುಗಳು ಶಾಂತಿ ಪ್ರಿಯರು ನಾವು ಸಹೋದರತೆಯಿಂದ ಸಹ ಬಾಳ್ವಿಯನ್ನು ಬಯಸುತ್ತಾ ನಮ್ಮ ಇಡೀ ಜೀವನವನ್ನು ಮಾನವ ಸಮಾಜದ ಏಳಿಗೆಗಾಗಿ ತ್ಯಾಗ ಮಾಡುವವರಾಗಿದ್ದೇವೆ ಆದರೆ ಕೆಲ ಕಿಟಿಗೇಡಿಗಳು ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ಹಾಗೂ ಚರ್ಚಿನ ಮೇಲೆ ದೌರ್ಜನವನ್ನು ಮಾಡುತ್ತಾ ಬಂದಿದ್ದಾರೆ ಶತ್ರುಗಳನ್ನು ಪ್ರೀತಿಸಿ ಕ್ಷಮಿಸಿರಿ.

ಎನ್ನುವ ಉದ್ದೇಶ ನಮ್ಮದಾಗಿದೆ ಎಂದು ಮಾನ್ಯ ತಹಸಿಲ್ದಾರರ ಮುಖಾಂತರ ಸನ್ಮಾನ್ಯ ಗೌರಾನ್ವಿತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ: ದಲಿತ ಪರ ಚಿಂತಕರಾದ ಹೆಚ್ ಎನ್. ಬಡಿಗೇರ್. ಆರ್‌ಸಿಎಫ್. ರಾಜ್ಯ ಸಮಿತಿ ಸದಸ್ಯ ಎಂ. ಗಂಗಾಧರ. ಮುಖಂಡರಾದ ಆರ್. ಅಂಬ್ರುಸ್. ದಲಿತ ಮುಖಂಡ ಚಿನ್ನಪ್ಪ ಹೆಡಿಗಿಬಾಳ ಕ್ಯಾಂಪ್. ವಲಯ ಪಾಲನ ಸಲಹಾ ಸಮಿತಿ ಉಪಾಧ್ಯಕ್ಷ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ ಅಧ್ಯಕ್ಷರು ದೌಲ್ ಸಾಬ್ ದೊಡ್ಡಮನಿ. ಕರವೇ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್. ರಾಜು ಬಾಬು ಮಾಜಿ ಪಾಲನ ಸಲಹಾ ಸಮಿತಿ ಉಪಾಧ್ಯಕ್ಷ. ಮತ್ತು ಹಿರಿಯ ವಕೀಲರಾದ ಬಾಲಸ್ವಾಮಿ ಗಿದ್ದಗಿ ಉಪಸ್ಥಿತರಿದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!