ಬೆಳಗಾವಿ: ಹೆರಾಯಿನ್ ಎಂಬ ಮಾದಕ ವಸ್ತುವನ್ನು ಎಲ್ಲಿಂದಲೋ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಯುವಕರನ್ನು ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಮಹಾದ್ವಾ ರೋಡ್ ನಿವಾಸಿ ವೈಭವ್ ಪ್ರಕಾಶ ಕುರಣಿ (21) ಹಾಗೂ ನಗರದ ಪೈಪ್ ಲೈನ್ ರಸ್ತೆ ನಿವಾಸಿ ಓಂ ಕಾರ್ ಚಂದ್ರಶೇಖರ್ ಜೋಶಿ (19) ಬಂಧಿತ ಆರೋಪಿಗಳು.
ಸಂಭಾಜಿ ಗಲ್ಲಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭಕ್ಕಾಗಿ ಹೆರಾಯಿನ್ ಎಂಬ ಮಾದಕ ವಸ್ತುವನ್ನು ಎಲ್ಲಿಂದಲೋ ತಂದು ಸಾರ್ವಜನಿಕ ರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಶಶಿಕುಮಾರ್ ಕುರುಳೆ ಪಿಎಸ್ಐ ಮಾರ್ಕೆಟ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತರಿಂದ 18000/-ಮೌಲ್ಯದ 24.87 ಗ್ರಾಮ ಹೀರೋಯಿನ್ ವಶಪಡಿಸಿಕೊಂಡು ಆರೋಪಿತರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 152/2025 ಕಲಂ 21.(b) ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರಿಸಲಾಗಿದೆ.
ವರದಿ: ಮಹಾಂತೇಶ್ ಎಸ್ ಹುಲಿಕಟ್ಟಿ




