ಪ್ಲೋರಿಡಾ ( ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಆತಿಥೇಯ ತಂಡವನ್ನು 13 ರನ್ ಗಳಿಂದ ಮಣಿಸಿತು.

——ಸರಣಿ ಶ್ರೇಷ್ಠ: ಮೊಹ್ಮದ್ ನವಾಜ್ —– ಮುಖಪುಟ ಚಿತ್ರ– ಪಂದ್ಯ ಶ್ರೇಷ್ಠ: ಸಾಹೀಬ್ಜಾದ ಫರ್ಹಾನ್
ಲೌಡೇರ್ ಹಿಲ್ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕ್ರಿಕೆಟ್ ತಂಡವು ನಿಗದಿತ 20 ಓವರುಗಳಲ್ಲಿ 4 ವಿಕೆಟ್ ಗೆ 189 ರನ್ ಗಳಿಸಿತು. ಪ್ರತಿಯಾಗಿ ಆಡಿದ ವೆಸ್ಟ್ ಇಂಡೀಸ್ ತಂಡವು 6 ವಿಕಟ್ ಗೆ 176 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಸ್ಕೋರ್ ವಿವರ
ಪಾಕಿಸ್ತಾನ 20 ಓವರುಗಳಲ್ಲಿ 4 ವಿಕೆಟ್ ಗೆ 189
ಸಾಹೀಬ್ಜಾದ ಫರ್ಹಾನ್ 74 ( 53 ಎಸೆತ, 3 ಬೌಂಡರಿ, 5 ಸಿಕ್ಸರ್), ಸಯೀಮ್ ಅಯ್ಯುಬ್ 66 ( 49 ಎಸೆತ, 4 ಬೌಂಡರಿ, 2 ಸಿಕ್ಸರ್), ಜೇಸನ್ ಹೋಲ್ಡರ್ 34 ಕ್ಕೆ 1),
ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 6 ವಿಕೆಟ್ ಗೆ 176
ಶೆರಫೆನ್ ರೋದರ್ ಪೋರ್ಡ್ 51 ( 35 ಎಸೆತ, 4 ಬೌಂಡರಿ, 3 ಸಿಕ್ಸರ್ )
ಅಲಿಕ್ ಅತಾಂಜೆ 60 ( 40 ಎಸೆತ, 8 ಬೌಂಡರಿ, 1 ಸಿಕ್ಸರ್ ) ಸಫಿಯಾನ್ ಮುಖೀಮ್ 20 ಕ್ಕೆ 1)




