ಐಗಳಿ: ದಿನಾಂಕ ೩೦-೦೪–202೪ ರಂದು ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಐಗಳಿ ಮತ್ತು ಐಗಳಿ ಕ್ರಾಸ್ ನಡುವಿನ ರಸ್ತೆಯಲ್ಲಿ ಬೈಕ್ ಹಾಗೂ ಕ್ರೂಜರ ನಡೆವಿ ಭೀಕರ ರಸ್ತೆ ಅಪಘಾತವಾಗಿ ಬೈಕ ಸವಾರ ಆರ್ಯನ ಪ್ರಭು ದಳವಾಯಿ ಹಾಗೂ ವಿನಾಯಲ ವಿಠ್ಠಲ ಬಾಡಗೆ ಇವರಿಗೆ ಬಾರಿ ಗಾಯ ಮತ್ತು ತೆಲೆಗೆ ಪೆಟ್ಟ ಬಿದ್ದಿದೆ ಇವರು ಇಬ್ಬರು ಅಪ್ರಾಪ್ತ ಬಾಲಕರಿಗೆ ಬೈಕ ಕೊಟ್ಟಿರು ಕುರಿತು ಅದು ಐಗಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಮೋಟಾರ ವಾಹನ ಕಾಯ್ದೆಯಡಿಯಲ್ಲಿ ಸಿಪಿಐ ರವರಾದ ಸಂತೋಷ ಹಳ್ಳೂರ ರವರು ಮಾನ್ಯ ನ್ಯಾಯಲಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರಿಂದ ಸಿ ಸಿ ನಂ ೩೪೪/೨೦೨೫ ಪ್ರಕರಣವು ದಾಖಲಾಗಿತ್ತು.
ಅಥಣಿ ಮಾನ್ಯ ೧ ನೇ ಅಧಿಕ ಸಿ ಜೆ ಮತ್ತು ಜೆ ಎಮ್ ಎಪ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷಕುಮಾರ ದೈವಜ್ಝ ರವರು ಆರೋಪಿ ನಂ೨ ರಾಜಕುಮಾರ ದಳವಾಯಿ ಇತನು ಆಪ್ರಾಪ್ತ ಬಾಲಕನಿಗೆ ವಿಮೆ ಇಲ್ಲದ ತನ್ನ ಮೋಟಾರು ಸೈಕಲನ್ನು ಚಲಾಯಿಸಲು ನೀಡಿದ್ದಕ್ಕಾಗಿ ಮಾನ್ಯ ನ್ಯಾಯಾಲವು ಆರೋಪಿಯ ಮೇಲೆ ಆರೋಪಣೆ ಸಾಭೀತಾಗಿದೆ ಎಂದು ಆರೋಪಿಗೆ ರೂ. ೨೫ ಸಾವಿರ ರೂ ದಂಡ ಮೋಟಾರ ಸೈಕಲ್ ವಿಮೆ ಇಲ್ಲದ್ದಕ್ಕಾಗಿ ರೂ.೧೦೦೦ ಸಾವಿರ ದಂಡ ಒಟ್ಟು ೨೬ ಸಾವಿರ ರೂ. ಹಾಗೂ ೧ ದಿನದ ಸಜೆ ವಿಧಿಸಿ ದಿನಾಂಕ ೦೨-೦೮-೨೦೨೫ ರಂದು ಆದೇಶಿಸಿರುತ್ತಾರೆ.ಸರಕಾರದ ಪರವಾಗಿ ಸನತಕುಮಾರ ಖೇಮಲಾಪೂರೆ ಸಹಾಯಕ ಸರಕಾರಿ ಅಭಿಯೋಜಕರು ಇವರು ವಾದವನ್ನು ಮಂಡಿಸಿದರು.




