
ವೀರಾಪುರ : ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮದ ಪಿ.ಕೆ.ಪಿ.ಎಸ್ ಸೊಸೈಟಿ ಮುಂದೆ ಕಳೆದ ಒಂದು ವಾರದಿಂದ ಯೂರಿಯಾ ಗೊಬ್ಬರಕ್ಕಾಗಿ ರೈತರು ಕಾದು ಕಾದು ಬೇಡುವ ಪರಿಸ್ಥಿತಿ ಬಂದಿದೆ. ಇನ್ನೊಂದು ಕಡೆ ಕಳೆದ ಸಮರ್ಪಕವಾಗಿ ಯೂರಿಯಾ ಗೊಬ್ಬರ ಸಿಕ್ಕಿದ್ದು, ಈ ಭಾರಿ ಒಬ್ಬ ಷೇರುದಾರನಿಗೆ ಕೇವಲ ಒಂದು ಚೀಲ ಗೊಬ್ಬರ ಸಿಗುತ್ತಿದೆ.

ಆದ್ರೆ ಷೇರು ಇಲ್ಲದೇ ಇರುವ ರೈತರಿಗೆ ಗೊಬ್ಬರ ಸಿಗದೇ ಕಂಗಾಲಾಗುವ ಪರಿಸ್ಥಿತಿ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮದ ರೈತರಿಗೆ ಬಂದೊದಗಿದೆ. ಆದ್ದರಿಂದ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ವೀರಾಪುರ ಗ್ರಾಮದ ನೊಂದ ರೈತರನ್ನು ಭೇಟಿಮಾಡಿ ಅವರ ಅಭಿಪ್ರಾಯ ಸಂಗ್ರಹ ಮಾಡಿ ಬೆಳಗಾವಿ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಎಚ್.ಡಿ ಕೊಳೇಕರ್ ರವರ ಜೊತೆ ಈ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಈ ವೀರಾಪುರ ಗ್ರಾಮದ ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಭಾಗ್ಯ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಬಸವರಾಜು




