ಗುಂಡ್ಲುಪೇಟೆ : ಧರ್ಮ ಬಯಲಾಗಿ ಮಠ ತೊರೆದಿದ್ದ ಯುವ ಸ್ವಾಮೀಜಿ ನಿಜಲಿಂಗಸ್ವಾಮೀಜಿ @ ಮಹಮ್ಮದ್ ನಿಸಾರ್ ಕೆಲ ದಿನಗಳ ಹಿಂದೆಯಷ್ಟೇ ಮುಸ್ಲಿಂರ ಟೋಪಿಯನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದು ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಗುರು ಮಲ್ಲೇಶ್ವರ ಮಠದ ಸ್ವಾಮೀಜಿಯಾಗಿದ್ದ ನಿಜಲಿಂಗಸ್ವಾಮಿ ಹೆಸರಿಗೆ ಮಂಗಳವಾರ ಇಸ್ಲಾಮಿಕ್ ಟೋಪಿ ಬಂದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ಹೊರಹಾಕಿದ್ದಾರೆ.
ಮೂಲತಃ ಯಾದಗಿರಿಯ ಮಹಮ್ಮದ್ ನಿಸಾರ್(23) ಬಸವ ತತ್ವಕ್ಕೆ ಆಕರ್ಷಿತರಾಗಿ ಲಿಂಗ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದರು.
ಇದಾದ ನಂತರ, ಕಳೆದ ಒಂದೂವರೆ ತಿಂಗಳಿನ ಹಿಂದೆ ಚೌಡಹಳ್ಳಿ ಮಠದ ಗುರುವಾಗಿ ಬಂದಿದ್ದರು. ಕಳೆದ ಭಾನುವಾರ ಪೂರ್ವಶ್ರಾಮದ ಧರ್ಮ ಬಯಲಾಗಿದ್ದರಿಂದ ಹಲವರ ಆಕ್ಷೇಪ ಹೊರಹಾಕಿದ್ದಕ್ಕೆ ಮಠ ತೊರೆದಿದ್ದರು.




