ಕನ್ನಡಿಗ ಕೆ.ಎಲ್. ರಾಹುಲ್ ಈಗ ತಾನೇ ಇಂಗ್ಲೆಂಡ್ ಬ್ಯೂಜಿ ಶೆಡ್ಯೂಲ್ ಮುಗಿಸಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಪತ್ನಿ ಆತಿಯಾ ಶೆಟ್ಟಿ ಅವರೊಂದಿಗೆ ಉತ್ತಮ ಸಮಯ ಕಳೆಯುತ್ತಿದ್ದಾರೆ. ಜತೆಗೆ ಮಗುವಿನೊಂದಿಗೆ ಕಾಲ ಕಳೆಯುವ ಫೋಟೋ ವನ್ನು ಶೇರ್ ಮಾಡಿಕೊಂಡಿದ್ದಾರೆ. ಮಗು ತಂದೆ ( ಕೆ.ಎಲ್. ರಾಹುಲ್) ಅವರ ಬೆರಳು ಹಿಡಿದಿಕೊಂಡಿರುವ ಸೊಗಸಾದ ಫೋಟೋವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಖ್ಯಾತನಾಮ ನಟರಿಂದ ಈ ಫೋಟೋ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜತೆಗೆ ಪತ್ನಿ ಅತಿಯಾ ಶೆಟ್ಟಿ ರಾಹುಲ್ ಬಾಹು ಬಂಧನದಲ್ಲಿ ಸಿಲುಕಿಕೊಂಡಿರುವ ಮುದ್ದಾದ ಫೋಟೋ ನೋಡುಗರ ಗಮನ ಸೆಳೆದಿದೆ.




