ನಿಪ್ಪಾಣಿ : ಭೋಜ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿಯಿಂದ ಸದಸ್ಯರಿಗೆ ಉಚಿತ ಬೆಡ್ ವ್ಯವಸ್ಥೆ ವಾರ್ಷಿಕ ಸಭೆಯಲ್ಲಿ ಪ್ರಶಾಂತ ಪಾಟೀಲರಿಂದ ಮಾಹಿತಿ ಆಂಕರಿಂಗ್ =ಹೌದು ಮಿತ ಖರ್ಚು, ಪಾರದರ್ಶಕ ಆಡಳಿತ, ಗ್ರಾಹಕರಿಗೆ, ಠೇವು ದಾರರಿಗೆ ಸಕಾಲಕ್ಕೆ ಸೇವೆ ಒದಗಿಸುವುದರೊಂದಿಗೆ ನಿರಂತರ ಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸಿದ್ದರಿಂದ ನಿಪ್ಪಾಣಿ ತಾಲೂಕು ಬೋಜ ಗ್ರಾಮದ ಮಹಾಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿಗೆ ಕಳೆದ ಆರ್ಥಿಕ ವರ್ಷದಲ್ಲಿ 29ಲಕ್ಷ 39 ಸಾವಿರ ರೂಪಾಯಿ ಲಾಭ ಬಂದಿದ್ದು ಸಂಘದ ಸದಸ್ಯರಿಗೆ 18ರಷ್ಟು ಲಾಭಾಂಶ ನೀಡಲಾಗುವುದೆಂದು ಅಧ್ಯಕ್ಷ ಪ್ರಶಾಂತ್ ಪಾಟೀಲ ತಿಳಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರಿಗೆ ಅನಾರೋಗ್ಯದ ಸಂದರ್ಭದಲ್ಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಘದ ವತಿಯಿಂದ ಮೂರು ಹಾಸಿಗೆಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ.

ಇದೇ ಸಂದರ್ಭದಲ್ಲಿ ತಿಳಿಸಿದರು. ಪ್ರಾರಂಭದಲ್ಲಿ ವೇದಿಕೆಯಲ್ಲಿಯ ಗಣ್ಯರಿಂದ ದೀಪ ಪ್ರಜ್ವಲ್ ನೆ ಹಾಗೂ ಶ್ರದ್ಧಾಂಜಲಿ ಸಭೆ ನಡೆಯಿತು ತದನಂತರ ವೇದಿಕೆಯಲ್ಲಿಯ ಗಣ್ಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಶಾಂತ ಪಾಟೀಲ್ ವರದಿ ವಾಚನ ಮಾಡಿ ಸಂಸ್ಥೆಯ ಸಾಂಪತ್ತಿಕ ಸ್ಥಿತಿ ವಿವರಿಸಿದರು. ಕಳೆದ ಆರ್ಥಿಕ ವರ್ಷದಲ್ಲಿ ಸಂಘವು 1349 ಸದಸ್ಯರು, 11ಲಕ್ಷ 98ಸಾವಿರ ರೂಪಾಯಿ ಶೇರ ಬಂಡವಾಳ, 3ಕೋಟಿ 60ಲಕ್ಷ ರೂಪಾಯಿ ನಿಧಿ, 11ಕೋಟಿ 1ಲಕ್ಷ ರೂಪಾಯಿ ಠೇವು, 8ಕೋಟಿ 79ಲಕ್ಷ ಗುಂತಾವಣೆ ಮಾಡಲಾಗಿದ್ದು ಸಂಘದ ಸದಸ್ಯರಿಗೆ 5ಕೋಟಿ 95ಲಕ್ಷ ರೂಪಾಯಿ ಸಾಲ ನೀಡಿ ಸಕಾಲಕ್ಕೆ ಮರುಪಾವತಿಸಿಕೊಂಡಿದ್ದರಿಂದ ಸಂಸ್ಥೆಗೆ 29ಲಕ್ಷ 39ಸಾವಿರ ರೂಪಾಯಿ ನಿವ್ವಳ ಲಾಭ ಬಂದಿರುವುದಾಗಿ ಪ್ರಶಾಂತ. ಪಾಟೀಲತಿಳಿಸಿದರು.

ಸಂಸ್ಥೆಯ ಪ್ರಭಾರಿ ಮುಖ್ಯ ವ್ಯವಸ್ಥಾಪಕ ರಾಜೇಂದ್ರ ಮುಗಳೆ ಅಂದಾಜು ಹಾಗೂ ಲಾಭ ಹಾನಿ ಪತ್ರಿಕೆ ವಾಚನ ಮಾಡಿದರು.ವಾರ್ಷಿಕ ಸಭೆಯಲ್ಲಿ ಡಾಕ್ಟರ್ ಸುದರ್ಶನ್ ಮುರಾಬಟ್ಟೆ, ಸಂಸ್ಥಾಪಕ ತಾತ್ಯಾಸಾಹೇಬ ಪಾಟೀಲ. ಸಂಚಾಲಕರಾದ ಸೂರಜ್ ಪಾಟೀಲ್,ಸ್ವಪ್ನಲ್ ಪಾಟೀಲ, ಹೊನಗೊಂಡಾ ಪಾಟೀಲ, ಸುರೇಂದ್ರ ಮಾನೆ, ತಾತ್ಯಾಸಾಹೇಬ್ ಭೋಸಲೇ, ಸಂಜೀವ ಮಗದುಮ್, ನಿರ್ಮಲ ಪಾಟೀಲ್, ಸುರೇಖಾ ಮೂರಾಬಟ್ಟೆ, ಲತೀಫ್ ಮಕಾನದಾರ, ಶರದ ಮಾನೆ ರಮೇಶ ಪಾಟೀಲ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಸುರೇಶ್ ಪಾಟೀಲ ಸ್ವಾಗತಿಸಿದರು. ಸಂಚಾಲಕ ಹೊನಗೊಂಡ ಪಾಟೀಲ ವಂದಿಸಿದರು.
ವರದಿ:ಮಹಾವೀರ ಚಿಂಚಣೆ




