ಸಿಂಧನೂರು : ಜುಲೈ 6 ಭೀಮ ಆರ್ಮಿ ಭಾರತ್ ಎಕ್ತ ಮಿಷನ್ ಸಂಘಟನೆ ವತಿಯಿಂದ ನಗರದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು ಎಂದು ಭೀಮ ಅರ್ಮಿ ಭರತ್ ಎಕ್ತ ಮಿಷನ್ ತಾಲೂಕ ಅಧ್ಯಕ್ಷ ಪ್ರವೀಣ್ ಕುಮಾರ್ ದುಮತಿ ತಿಳಿಸಿ ಸಿಂಧನೂರು ತಾಲೂಕಿನ ಗಾಂಧಿನಗರ ದಲ್ಲಿರುವ ಶ್ರೀ ಗುರು ಸಿದ್ದೇಶ್ವರ ಪ್ರೌಢ ಶಾಲೆ ಪರವಾನಗಿ ಹೊಂದಿದ್ದು ಅಲ್ಲಿ ಅನಧಿಕೃತವಾಗಿ ಎಲ್ ಕೆಜಿ, ಯು ಕೆಜಿ, ಮತ್ತು 1 ರಿಂದ 7 ನೇ ತರಗತಿ ವರೆಗೆ ಬೇರೊಂದು ಶಾಲೆಗಳಿಗೆ ಟ್ಯಾಗ್ ಕೊಟ್ಟು ಶಾಲೆ ನಡೆಸುತ್ತಿದ್ದು ನಮ್ಮ ಸಂಘಟನೆಯ ಗಮನಕ್ಕೆ ಬಂದಿದ್ದು 23/07/2025 ರಂದು ಇದು ಕಾನೂನು ಬಾಹಿರ ಎಂದು ಮನವಿ ಸಲ್ಲಿಸಿದ್ದು ಅದರ ತನಿಖೆಗಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ ದುರುದಾರರನ್ನು ಕರೆಯದೆ ಶಾಲೆ ಮಂಡಳಿಯ ಅನುಕೂಲಕೆ ತಕ್ಕಂತೆ ವಲಯ ಶಿಕ್ಷಣ ಸಂಯೋಜಕರು ವರದಿ ನೀಡಿದ್ದು ಕಾನೂನು ಬಾಹಿರ ಮತ್ತು ಅಧಿಕಾರಿಗಳು ಖಾಸಗಿ ಶಾಲೆಗೆ ಸಹಕಾರ ನೀಡುತ್ತಿದ್ದರಿಂದ ಸರಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ.
ಆದ್ದರಿಂದ ವರದಿ ಯನ್ನು ತನಿಖೆ ಮಾಡದೇ ನೀಡಿದ್ದು ಆ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಹಾಗೆ ಶ್ರೀ ಗುರು ಸಿದ್ದೇಶ್ವರ ಪ್ರೌಢ ಶಾಲೆ ಪರವಾನಗಿ ರದ್ದು ಪಡಿಸಿ ಅನಧಿಕೃತ ಶಾಲೆ ನಡೆಯದಂತೆ ನೋಡಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹೋರಾಟ ಮಾಡಿ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಅಧ್ಯಕ್ಷರು ಪ್ರವೀಣ್ ದುಮತಿ, ಗೌರವ ಅಧ್ಯಕ್ಷ ಹುಲ್ಲೇಶ್ ಮುದಗಲ್, ರಮೇಶ್ ತಡಕಲ್, ಸಿಪಿಎಂಎ ಲ್ ಸಂಘದ ಎಂ. ಗಂಗಾಧರ್ ಬಸವಲಿಂಗ, ಸಂಜು ಸುಕಲಪೇಟೆ, ಹನುಮೇಶ್, ಮಲ್ಲೇಶ್, ವಿನಯ, ಇತರರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ




