ಚಿಟಗುಪ್ಪ : ಚಿಟಗುಪ್ಪ ತಾಲ್ಲೂಕಿನ ನಾಗನಕೇರಾ ಗ್ರಾಮದಿಂದ ಮನ್ನಾಎಖೇಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಗಿಡ–ಗಂಟಿಗಳು ಬೆಳೆದು ಕೊಂಬೆಗಳು ರಸ್ತೆಗೆ ಬಾಗಿವೆ.ಇದರಿಂದ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ.
ಸುಮಾರು ಮೂರು ಕಿಲೋ ಮೀಟರ್ ರಸ್ತೆ ಉದಕ್ಕೂ ಎರಡೂ ಬದಿಗೆ ಮುಳ್ಳು ಕಂಟಿಗಳು ಎತ್ತರಕ್ಕೆ ಬೆಳೆದಿವೆ.ಅಲ್ಲದೆ ರಸ್ತೆ ಮದ್ಯದಲ್ಲಿ ತಗ್ಗು ಗುಂಡಿಗಳು ಇರುವುದರಿಂದ ಪ್ರಯಾಣಿಕರು ಇನ್ನೂ ಹೆಚ್ಚಿನ ತೊಂದರೆ ಎದುರಿಸುತ್ತಿದ್ದಾರೆ.
‘ಗಿಡ–ಗಂಟಿ ಬೆಳೆದ ಕಾರಣ ತಿರುವು ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳು ಕಾಣುತ್ತಿಲ್ಲ. ಇದರಿಂದ ಅಪಘಾತಗಳು ಸಹಜ ಎಂಬಂತಾಗಿದೆ ಎಂಬುದು ಸವಾರ ವಿಠ್ಠಲ ರೆಡ್ಡಿ ಹೇಳುತ್ತಿದ್ದಾರೆ.
ರಸ್ತೆ ಬದಿ ಹುಲ್ಲು ಬೆಳೆದಿದ್ದರಿಂದ ರಸ್ತೆಗಳು ಕಿರು ರಸ್ತೆಗಳಂತಾಗಿವೆ.ನಿತ್ಯವೂ ಸಂಚರಿಸುವ ಚಾಲಕರಿಗೆ ಆ ಹಾದಿ ಗೊತ್ತಿರುತ್ತದೆ. ಅಪರೂಪಕ್ಕೆ ಬರುವ ಚಾಲಕರು ಗೊಂದಲಕ್ಕೀಡಾಗುತ್ತಾರೆ.ಒಮ್ಮೊಮ್ಮೆ ಎದುರಿನ ವಾಹನಗಳ ಬಗ್ಗೆ ತಿಳಿಯದೇ ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿದೆ.ರಸ್ತೆ ಬದಿ ಜಂಗಲ್ ಕಟಾವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ರಸ್ತೆಗಳು ಸಾರ್ವಜನಿಕ ಆಸ್ತಿಗಳು.ಅವುಗಳು ವ್ಯವಸ್ತಿತವಾಗಿ ಇರುವಂತೆ ನೋಡಿಕೊಳ್ಳಬೇಕಾದದ್ದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಕರ್ತವ್ಯ.ತಕ್ಷಣವೇ ರಸ್ತೆ ಪಕ್ಕದ ಹುಲ್ಲು,ಮುಳ್ಳು ಕಂಟಿಗಳು ತೆಗೆದು ಶುಚಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರ.
ವರದಿ : ಸಜೀಶ ಲಂಬುನೋರ




