Ad imageAd image

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ: ಮಾಜಿ ಸಚಿವ ಬೆಳ್ಳುಬ್ಬಿ ಆರೋಪ

Bharath Vaibhav
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ: ಮಾಜಿ ಸಚಿವ ಬೆಳ್ಳುಬ್ಬಿ ಆರೋಪ
WhatsApp Group Join Now
Telegram Group Join Now

ನಿಡಗುಂದಿ : ಪಟ್ಟಣದ ಐದನೇ ವಾರ್ಡನ ಉಪಚುನಾವಣೆಗಾಗಿ ತಹಸೀಲ್ದಾರ್ ಕೊಟ್ಟಿರುವ ಹೊಸ ಮತದಾರರ ಪಟ್ಟಿಯಲ್ಲಿ ಹಳೆಯ 20 ಮತದಾರರನ್ನು ಕೈಬಿಟ್ಟು ಬೇರೊಂದು ವಾರ್ಡನ 40 ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಿರುವುದು ಆಘಾತಕಾರಿ ಸಂಗತಿಯಾಗಿದೆ.

ಇಲ್ಲಿನ ಅಧಿಕಾರಿಗಳು ಕಾಂಗ್ರೆಸನ ಹಾಗೂ ಸಚಿವ ಶಿವಾನಂದ ಪಾಟೀಲರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲಾಧಿಕಾರಿಗಳು,ತಹಸೀಲ್ದಾರ್‌ರು, ಪ.ಪಂ ಮುಖ್ಯಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆಯುತ್ತಿದ್ದೇನೆ.

ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಬೇಕು.ಇದು ವಿಧಾನಸಭಾ ಚುನಾಣೆಯಲ್ಲ, ಐದನೇ ವಾರ್ಡನಲ್ಲಿ ನಡೆದಿರುವ ಚುನಾವಣೆಯಾಗಿದೆ ಎಂದ ಅವರು ನಿಡಗುಂದಿಯಲ್ಲಿ ನ್ಯಾಯಸಮ್ಮತವಾದ ಚುನಾವಣೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಿವಾನಂದ ಅವಟಿ, ಶಿವಾನಂದ ಮುಚ್ಚಂಡಿ, ಹನಮಂತ ಬೇವಿನಕಟ್ಟಿ, ಸಂಗಮೇಶ ಗೂಗಿಹಾಳ, ಗಣೇಶ ಕೂಚಬಾಳ, ಇದ್ದರು.

ಐದನೇ ವಾರ್ಡನ ಬಿಜೆಪಿ ಅಭ್ಯರ್ಥಿ ಈರಣ್ಣ ಗೋನಾಳಗೆ ಬೆಂಬಲ ಇದೆ ಎಂದು ಘೋಷಿಸಿದರು.
ಉಪ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಏಳು ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ಎ.ಡಿ.ಅಮರವಾಡಗಿ ತಿಳಿಸಿದ್ದಾರೆ.

ವರದಿ : ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!